Book Appointment
X

Choose location for Appointment


ಪರಿಚಯ

ನಿಮಗೆ ಗೊತ್ತೆ? ಭಾರತದಲ್ಲಿ ಪ್ರತಿ ಐದು ಜನರಲ್ಲಿ ಒಬ್ಬರಿಗೆ ವೆರಿಕೋಸ್ ವೇನ್ ಗಳ ಸಮಸ್ಯೆಗೆ ಒಳಗಾಗಿರುತ್ತಾರೆ. ಹೃದಯಕ್ಕೆ ರಕ್ತವನ್ನು ಹಿಂದಕ್ಕೆ ಕೊಂಡೊಯ್ಯುವ ರಕ್ತನಾಳಗಳ ಕವಾಟಗಳು ಸಮರ್ಪಕವಾಗಿ ಕೆಲಸ ಮಾಡದೇ ಇದ್ದಾಗ ವೆರಿಕೋಸ್ ವೇನ್ ಗಳು ಕಾಣಿಸಿಕೊಳ್ಳುತ್ತವೆ.

ಆರಂಭಿಕ ಹಂತಗಳಲ್ಲಿ, ವೆರಿಕೋಸ್ ವೇನ್ ಗಳು ಬರಿ ಕಣ್ಣಿಗೆ ಕಾಣಿಸಬಹುದು ಅಥವಾ ಕಾಣಿಸದೆಯೂ ಇರಬಹುದು. ಆದರೆ ದಿನ ಕಳೆದಂತೆ ಸ್ಪೈಡರ್ ವೇನ್ಗಳು  ಸಣ್ಣ ಜೇಡರ ಬಲೆಯ ಆಕಾರದಲ್ಲಿ ಕಾಣಿಸಲಾರಂಭಿಸುತ್ತವೆ.

ರಕ್ತ ಮೇಲಕ್ಕೆ ಹರಿಯದೆ  ಮಡುಗಟ್ಟಿದಾಗ ವೇನ್ ಗಳು ಹಿಗ್ಗಿ, ಉಬ್ಬಿಕೊಳ್ಳುವುದರಿಂದ ವೆರಿಕೋಸ್ ವೇನ್ ಗಳು ಉಂಟಾಗುತ್ತವೆ ಮತ್ತು ಕಾಲು ಮತ್ತು ಪಾದಗಳ ಚರ್ಮದ ಮೇಲ್ಭಾಗದಲ್ಲಿ ಉಬ್ಬಿದಂತೆ ಎದ್ದು ಕಾಣುತ್ತವೆ.

ಚಿಕಿತ್ಸೆ ನೀಡದೇ ಇರುವುದು ಅಥವಾ ವಿಳಂಬ ಮಾಡುವುದರಿಂದ ಚರ್ಮದ ಬಣ್ಣದಲ್ಲಿ ಬದಲಾವಣೆ ಅದರೊಟ್ಟಿಗೆ ಎಡಿಮದಂತಹ ಸಮಸ್ಯೆಗಳು ಉಂಟಾಗಿ, ಅದರಿಂದ ಸಿರೆಯ ಹುಣ್ಣುಗಳು/Active venous ulcers, ದೀರ್ಘ ಕಾಲದ ಸಿರೆಯ ಕೊರತೆ/ chronic venous insufficiency, ಮತ್ತು ಆಳದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಂಕೀರ್ಣ ಸಮಸ್ಯೆಗಳು ಉಂಟಾಗುತ್ತವೆ.

ರೋಗ ಲಕ್ಷಣಗಳು

ವೆರಿಕೋಸ್ ವೇನ್ ನ ರೋಗ ಲಕ್ಷಣಗಳು ವಿವಿಧ ವ್ಯಕ್ತಿಗಳಲ್ಲಿ ವಿವಿಧ ರೀತಿಗಳಲ್ಲಿ ಕಾಣಿಸಿ ಕೊಳ್ಳುತ್ತವೆ ಉದಾಹರಣೆಗೆ :

 1. ಕಾಲುಗಳಲ್ಲಿ ನೋವು ಮತ್ತು ತೊಂದರೆ
 2. ಕಾಲುಗಳಲ್ಲಿ ಸೆಳೆತ ಮತ್ತು ತುರಿಕೆ
 3. ಕಾಲಿನ ಹರಡು/ಆಂಕಲ್ ನ ಸುತ್ತ ಒತ್ತಡ ಮತ್ತು ಊತ
 4. ಮೀನಖಂಡಗಳಲ್ಲಿ ಭಾರದ ಮತ್ತು ಬಿಗಿತದ ಅನುಭವ
 5. ಕಾಲುಗಳಲ್ಲಿ ಬಲವಾದ ಬಡಿತದ ಅನುಭವ

ಶೇಖಡ 85% ರಷ್ಟು ಕಾಲಿನ ಹುಣ್ಣುಗಳು ವೆರಿಕೋಸ್ ವೇನ್ ಗಳಿಂದ ಉಂಟಾಗುತ್ತವೆ

 ಕಾರಣಗಳು

ವೆರಿಕೋಸ್ ವೇನ್ ಗಳು ಈ ಕಾರಣಗಳಿಂದ ಉಂಟಾಗಬಹುದು:

 1. ಕಳಪೆ ಜೀವನ ಶೈಲಿ
 2. ಬೊಜ್ಜು ಮತ್ತು ದೈಹಿಕ ಚಟುವಟಿಕೆಯ ಕೊರತೆ
 3. ಅತಿಯಾದ ಧೂಮಪಾನ ಮತ್ತು ಮದ್ಯದ ಸೇವನೆ
 4. ಬಿಗಿಯಾದ ಉಡುಪು ಮತ್ತು/ಅಥವಾ ಹೈಹೀಲ್ಸ್ ಧರಿಸುವುದು
 5. ದೀರ್ಘ ಕಾಲ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು
 6. ರಕ್ತ ಹೆಪ್ಪುಗಟ್ಟುವಿಕೆಯ ಹಿಂದಿನ ಇತಿಹಾಸ
 7. ಆನುವಂಶಿಕ ಮತ್ತು ವಂಶವಾಹಿಗಳು/ಜೀನ್ ಗಳು
 8. ಗರ್ಭಾವಸ್ಥೆ

ಚಿಕಿತ್ಸೆಯ ವಿಧಗಳು

ವೆರಿಕೋಸ್ ವೇನ್ ಗಳಿಗೆ ಹಲವಾರು ವಿಧದ ಚಿಕಿತ್ಸಾ ವಿಧಾನಗಳು ದೊರೆಯುತ್ತವೆ:

 1. Vein ligation/ ಅಭಿದಮನಿ ಬಂಧನ
 2. Vein stripping/ ಅಭಿದಮನಿಗಳ ತೆಗೆಯುವಿಕೆ
 3. Sclerotherapy/ ಸ್ಕ್ಲೀರೋಥೆರಪಿ
 4. Radiofrequency ablation/ ರೇಡಿಯೋ ಫ್ರಿಕ್ವೆನ್ಸಿ ಅಬ್ಲೇಶನ್
 5. Endovenous laser treatment/ ಎಂಡೋ ವೀನಸ್ ಲೇಸರ್ ಚಿಕಿತ್ಸೆ

ಅವಿಸ್ ನಾಳೀಯ ಕೇಂದ್ರದಲ್ಲಿನ ರೋಗಿಗಳ ಹರಿವು  

ಅವಿಸ್ ನಾಳೀಯ ಕೇಂದ್ರದಲ್ಲಿ , ನಾವು ಒಂದು ಸರಳವಾದ ಮತ್ತು ನೇರವಾದ ಚಿಕಿತ್ಸಾ ವಿಧಾನವನ್ನು ಹೊಂದಿದ್ದೇವೆ. ನಿಮ್ಮ ನೋಂದಣಿಯ ನಂತರ , ನಿಮ್ಮ ಮೊದಲ ಸಮಾಲೋಚನೆ ಒಬ್ಬ ಹಿರಿಯ ವೈದ್ಯರೊಂದಿಗೆ ಆಗುತ್ತದೆ ಹಾಗೆಯೇ ಅವರು  ತೊಂದರೆ ಇರುವ ಜಾಗದಲ್ಲಿ ವೆರಿಕೋಸ್ ವೇನ್ ಗಳು  ಇರುವುದನ್ನು ಪತ್ತೆ ಮಾಡಲು ದೈಹಿಕ ಪರೀಕ್ಷೆಯನ್ನೂ ಮಾಡುತ್ತಾರೆ.

ನಂತರದಲ್ಲಿ ವೆರಿಕೋಸ್ ವೇನ್ ಗಳು ಇರುವ ಜಾಗ ಮತ್ತು ಅದರ ಗಂಭೀರತೆಯನ್ನು ತಿಳಿಯಲು, ಸಂಪೂರ್ಣವಾಗಿ ಉಚಿತವಾದ ಒಂದು ಡುಪ್ಲೆಕ್ಸ್ ಅಲ್ಟ್ರಾ ಸೌಂಡ್  ಸ್ಕಾನ್/A duplex ultrasound scan  ಅನ್ನು ಮಾಡಲಾಗುತ್ತದೆ. ಎರಡನೆಯ ಭೇಟಿಯಲ್ಲಿ ಇಂಟರ್ ವೆಂಶನಲ್ ರೇಡಿಯಾಲಜಿಸ್ಟ್/ The interventional radiologist ಅವರು ನಿಮ್ಮ ಅಲ್ಟ್ರಾ ಸೌಂಡ್ ಸ್ಕ್ಯಾನ್ ರಿಪೊರ್ಟ್ ನ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ. ಒಂದು ಪ್ಯಾಕೇಜಿನ ವೆಚ್ಚವನ್ನು ನೀವು ಅರ್ಥ ಮಾಡಿಕೊಳ್ಳುವ ಸಲುವಾಗಿ ಎಂಡೋವೀನಸ್ ಲೇಸರ್ ಚಿಕಿತ್ಸೆಗೂ ಮುನ್ನ ಒಂದು ನಿಖರವಾದ  ಮತ್ತು ಆಳವಾದ ಹಣಕಾಸಿನ ಸಮಾಲೋಚನೆಯನ್ನು ಮಾಡಲಾಗುತ್ತದೆ.

ಡಾ. ವಿನಯ್ ನ್ಯಾಪತಿ ಅವರು ಪ್ರಖ್ಯಾತ ವ್ಯಾಸ್ಕ್ಯುಲಾರ್  ಮತ್ತು ಇಂಟವೇರ್ನ್ಯಾಲ್ ರೇಡಿಯಾಲಜಿಸ್ಟ್ ಆಗಿದ್ದಾರೆ. 15 ವರ್ಷಗಳ ವೈದ್ಯಕೀಯ ಅನುಭವ ಮತ್ತು 13000+  ರೋಗಿಗಳಿಗೆ ಪರಿಹಾರ ನೀಡಿರುವ ಇವರು, ಅತ್ಯಂತ ಮೆಚ್ಚುಗೆಯ ವೈದ್ಯರಾಗಿದ್ದು, ವೆರಿಕೋಸ್ ವೇನ್ ಗಳ ನೋವುರಹಿತ ಮತ್ತು ಕನಿಷ್ಠ ಆಕ್ರಮಣಕಾರಿ ಚಿಕಿತ್ಸೆ ಗಾಗಿ ಪ್ರಖ್ಯಾತರಾಗಿದ್ದಾರೆ.

ವೆರಿಕೋಸ್ ವೇನ್ ಗಳಿಗೆ ಭಾರತದಲ್ಲಿರುವ ಏಕೈಕ ಸಮಗ್ರ ಆಸ್ಪತ್ರೆ ಎಂದರೆ, ಅದುವೆ ಎವಿಸ್ ನಾಳೀಯ ಕೇಂದ್ರ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088837000

Branches

https://www.simoneetkurt.ch/daftar-situs-slot-bonus-new-member-100-to-kecil-3x-5x-7x-8x-10x-15x-20x-di-awal/ https://www.avisvascularcentre.com/wp-content/slot-gacor/ https://www.avisvascularcentre.com/what-type-of-doctor-will-treat-my-varicose-veins/ https://ecoqld.com/slot-bonus/ https://honolulujewelrycompany.com/Hawaiian-Names/ https://ecoqld.com/wp-includes/slot-pulsa/
Home
Services
Doctors
Branches
Blog
https://kuwaitallergyclinic.com/slot-online/
https://hprojekty.sk/slot-gacor/