ವೆರಿಕೋಸ್ ವೆಯಿನ್ಸ್ ಗಳಿಗೆ/ಉಬ್ಬಿರುವ ರಕ್ತನಾಳಗಳಿಗೆ ಚಿಕಿತ್ಸೆ ನೀಡದೆ ಇದ್ದಾಗ ಆಗುವ ಪರಿಣಾಮಗಳೇನು/ಏನಾಗುತ್ತದೆ?

varicose veins risks

ರಕ್ತ ಹಿಂದಕ್ಕೆ ಹರಿಯುವುದನ್ನು ತಡೆಗಟ್ಟಲು ರೂಪುಗೊಂಡಿರುವ ರಕ್ತನಾಳಗಳಲ್ಲಿನ ಒನ್-ವೇ ಕವಾಟಗಳು ದುರ್ಬಲ ಮತ್ತು
ದೋಷಯುಕ್ತವಾದಾಗ, ರಕ್ತನಾಳಗಳಲ್ಲಿ ರಕ್ತ ಶೇಖರಣೆಯಾಗಿ ಮಡುಗಟ್ಟಲು ಆರಂಭವಾಗುತ್ತದೆ, ನಂತರ, ಹೆಚ್ಚಿದ ರಕ್ತದ
ಹರಿವಿನ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಕ್ತನಾಳಗಳ ಹಿಗ್ಗುವಿಕೆ ಮತ್ತು ತಿರುಚುವಿಕೆ ಉಂಟಾಗಿ,
ಇದು ಕೊನೆಗೆ ವೆರಿಕೋಸ್ ವೆಯಿನ್ಸ್ ಗಳ/ ಉಬ್ಬಿರುವ ರಕ್ತನಾಳಗಳ ಸಮಸ್ಯೆಗೆ ಕಾರಣವಾಗುತ್ತದೆ.


ಅನೇಕ ವೇಳೆ ಕೆಲವರು, ಚರ್ಮದ ಪದರದ ಕೆಳಗೆ.ಕಾಣುವ ಸಣ್ಣದಾಗಿ ಕವಲೊಡೆದಿರುವ ಅಥವಾ ಜೇಡರ ಬಲೆಯಂತೆ
ಕಾಣುವ ‘ಸ್ಟೈಡರ್ ವೆಯಿನ್ಸ್ ಗಳನ್ನು ವೆರಿಕೋಸ್ ವೆಯಿನ್ಸ್ ಗಳೆಂದು ಭಾವಿಸಿ ಗೊಂದಲಕ್ಕೆ ಒಳಗಾಗುತ್ತಾರೆ. ಸ್ಟೈಡರ್ ವೆಯಿನ್ಸ್ ಗಳು
ಸಾಮಾನ್ಯವಾಗಿ ,1 ಮಿ.ಮೀ ಗಿಂತಲೂ ಕಡಿಮೆ ವ್ಯಾಸವನ್ನು ಹೊಂದಿರುವ ನೀಲಿ ಅಥವಾ ಕೆಂಪು ರೇಖೆಗಳಾಗಿ ಕಾಣಿಸುತ್ತವೆ
ಮತ್ತು ಅವು ಸಾಮಾನ್ಯವಾಗಿ ನೋವುರಹಿತವಾಗಿರುತ್ತವೆ ಹಾಗೂ ಇವು ಇತರ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ
ಕಾರಣವಾಗುವುದಿಲ್ಲ. ಅವು ಸಾಮಾನ್ಯವಾಗಿ ಯಾವುದೇ ಕಾಲಿನ ಊತಕ್ಕೆ ಕಾರಣವಾಗುವುದಿಲ್ಲ. ಸೈಡರ್ ವೆಯಿನ್ಸ್ ಗಳ
ಚಿಕಿತ್ಸೆಯನ್ನು ಹೆಚ್ಚಾಗಿ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಯೆಂದು ಪರಿಗಣಿಸಲಾಗುತ್ತದೆ. ಅವುಗಳಿಂದ ಭಿನ್ನವಾಗಿರುವ,
ವೆರಿಕೋಸ್ ವೆಯಿನ್ಸ್ ಗಳಿಗೆ/ಉಬ್ಬಿರುವ ರಕ್ತನಾಳಗಳಿಗೆ ಚಿಕಿತ್ಸೆ ಸಿಗದಿದ್ದಾಗ ಅವುಗಳಿಗೆ ಸಂಬಂಧಿಸಿದ ಆರೋಗ್ಯ
ಸಮಸ್ಯೆಗಳು ಉಂಟಾಗಬಹುದು.

varicose veins risks


ನಿಮ್ಮಲ್ಲಿ ಈಗ ರೋಗಲಕ್ಷಣಗಳು ಕಾಣದೇ ಹೋದರೂ ನಿಮಗೆ ಆ ಸಮಸ್ಯೆಗಳು ಎಂದಿಗೂ ಬರುವುದಿಲ್ಲ ಎಂದು ಅರ್ಥವಲ್ಲ.
ನಿಜಾಂಶ ಎಂದರೆ, ನಿಮಗೆ ನೋವು ಕಾಣಿಸಿಕೊಂಡ ಆರಂಭದಲ್ಲೇ, ಹೆಚ್ಚು ತಡ ಮಾಡದೆ ಚಿಕಿತ್ಸೆ ಪಡೆಯುವುದು
ಒಳ್ಳೆಯದು, ವೆರಿಕೋಸ ವೆಯಿನ್ಸ್ಉ ಬ್ಬಿರುವ ರಕ್ತನಾಳಗಳಿಗೆ ಚಿಕಿತ್ಸೆ ನೀಡದೆ ಇದ್ದಾಗ ಉಂಟಾಗಬಹುದಾದ ಕೆಲವು ಅಡಗಿರುವ ಅಪಾಯಗಳ ಬಗ್ಗೆ ನಾವು ತಿಳಿದುಕೊಳ್ಳೋಣ.


1) ತುರಿಕೆ – ಚಿಕಿತ್ಸೆ ಪಡೆಯದ ವೆರಿಕೋಸ್ ವೆಯಿನ್ಸ್ ಗಳ/ ಉಬ್ಬಿರುವ ರಕ್ತನಾಳಗಳ ಅತಿಸೌಮ್ಯ ಮತ್ತು
ಸಾಮಾನ್ಯವಾದ ಒಂದು ರೋಗ ಲಕ್ಷಣವೆಂದರೆ “ತುರಿಕೆ” ಯ ಅನುಭವ. ಅನೇಕ ವೇಳೆ ಇದನ್ನು ಹೆಚ್ಚಾಗಿ
‘ಒಣಚರ್ಮ’ ಎಂದು ಪರಿಗಣಿಸಿ, ಓವರ್-ದಿ-ಕೌಂಟರ್ ಮುಲಾಮುಗಳು ಮತ್ತು ಲೋಷನ್ಗಳನ್ನು ಬಳಸಲಾಗುತ್ತದೆ.


2) ಹೆಚ್ಚಿದ ನೋವು ಮತ್ತು ಊತ, ರಕ್ತನಾಳಗಳಲ್ಲಿನ ಒತ್ತಡ ಹೆಚ್ಚಾದಂತೆ, ರಕ್ತದಲ್ಲಿಯ ದ್ರವ ಕೆಲವೊಮ್ಮೆ ಪಕ್ಕದ
ಅಂಗಾಂಶಗಳಿಗೆ ಸೋರಿಕೆಯಾಗುತ್ತದೆ. ಇದರಿಂದ ಊತ ಕಾಣಿಸಿಕೊಳ್ಳುತ್ತದೆ. ವೆರಿಕೋಸ್ ವೆಯಿನ್ಸ್ ಗಳಿಗೆ/ ಉಬ್ಬಿರುವ
ರಕ್ತನಾಳಗಳಿಗೆ ಚಿಕಿತ್ಸೆ ಸಿಗದಿದ್ದಾಗ , ಅದು ರಕ್ತನಾಳಗಳ ಹೆಚ್ಚಿನ ಹಾನಿಗೆ ಕಾರಣವಾಗಿ, ಊತ ಮತ್ತು ನೋವು ಇನ್ನೂ
ಜಾಸ್ತಿಯಾಗುವಂತೆ ಮಾಡುತ್ತದೆ.


3)ನಿಶ್ಯಕ್ತತೆ – ಚಿಕಿತ್ಸೆ ನೀಡದೆ ಇದ್ದರೆ, ಅದು ನಿಮ್ಮ ಕ್ರಿಯಾಶೀಲ, ಚಟುವಟಿಕೆಯಿಂದ
ಕೂಡಿದ ಜೀವನಶೈಲಿಗೆ ಹಾನಿ ಮಾಡುತ್ತದೆ. ದಿನವಿಡೀ ನಿಂತೇ ಮಾಡುವ ಮತ್ತು ಓಡಾಡುವ ಕೆಲಸ ನಿಮ್ಮದಾಗಿದ್ದರೆ ಅಥವಾ ಜೀವನಶೈಲಿ ಹಾಗಿದ್ದರೆ ಕಾಲುಗಳ ದುರ್ಬಲತೆಯಿಂದ ನಿಮಗೆ ಆಯಾಸವಾಗುತ್ತದೆ
ಮತ್ತು ಅದರಿಂದ ದೊಡ್ಡ ಪರಿಣಾಮಗಳಾಗಬಹುದು.


4) ಲಿಪೊಡರ್ಮೆಟೊಸ್ಥಿರೊಸಿಸ್ – ವೀನಸ್ ಇನ್ ಸಫಿಶಿಯನ್ಸಿಯ/ಸಿರೆಯ ಕೊರತೆಯ ಈ ಸ್ಥಿತಿಯು ಉಬ್ಬಿರುವ
ರಕ್ತನಾಳಗಳ ಸುತ್ತ ಚರ್ಮ ಗಟ್ಟಿಯಾಗಲು ಮತ್ತು ಬಣ್ಣ ಬದಲಾಗಲು ಕಾರಣವಾಗುತ್ತದೆ. ಇದು ರಕ್ತನಾಳಗಳ ಸುತ್ತ,
ವಿಶೇಷವಾಗಿ ಪಾದಗಳ ಸುತ್ತಲೂ ನೋವು ಮತ್ತು ಊತವನ್ನು ಉಂಟುಮಾಡಬಹುದು.


5) ಹುಣ್ಣುಗಳು – ರಕ್ತನಾಳಗಳಲ್ಲಿನ ಹಾನಿಯಾದ ಕವಾಟಗಳಿಂದಾಗಿ ರಕ್ತದ ಪರಿಚಲನೆ ಸಲೀಸಾಗಿ
ಆಗುವುದಿಲ್ಲ. ಆ ಕಾರಣದಿಂದ ರಕ್ತನಾಳಗಳಲ್ಲಿ ಒತ್ತಡ ನಿರಂತರವಾಗಿ ಹೆಚ್ಚಾಗಬಹುದು. ರಕ್ತನಾಳಗಳು
ದುರ್ಬಲವಾಗುತ್ತವೆ ಮತ್ತು ಒಂದು ಸಣ್ಣ ಗೀರೂ ಸಹ ನಿಮ್ಮ ಕಾಲುಗಳಲ್ಲಿನ ಚರ್ಮವನ್ನು ಸುಲಭವಾಗಿ ಸೀಳಿ
ಹುಣ್ಣುಗಳನ್ನು ಉಂಟುಮಾಡಬಹುದು. ಅದಾಗಿಯೇ ರಕ್ತಸ್ರಾವ ಸಂಭವಿಸಬಹುದು ಹಾಗೂ ಗಾಯಗಳು ಮಾಯಲು
ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.


6) ಥಾಂಬೋಫೆಬೈಟಿಸ್ – ಸಾಮಾನ್ಯವಾಗಿ ಸೂಪರ್ಫಿಶಿಯಲ್ ಫ್ರಾಂಬೋಫೆಬಟಿಸ್ ಬರಲು ಒಂದು ಕಾರಣವೆಂದರೆ
ಉಬ್ಬಿರುವ ರಕ್ತನಾಳಗಳು. ಇದು ಉರಿಯೂತದ ಪ್ರಕ್ರಿಯೆಯಾಗಿದ್ದು, ಅದರಿಂದ ರಕ್ತದಲ್ಲಿ ಕ್ಲಾಟ್/ಗೆಡ್ಡೆಗಳು ಉಂಟಾಗುತ್ತವೆ
ಮತ್ತು ಅವು ಒಂದು ಇಲ್ಲವೇ ಇನ್ನೂ ಹೆಚ್ಚಿನ ರಕ್ತನಾಳಗಳಲ್ಲಿ, ವಿಶೇಷವಾಗಿ ಕಾಲುಗಳಲ್ಲಿನ ರಕ್ತನಾಳಗಳಲ್ಲಿ ಅಡ್ಡಿ ಮಾಡುತ್ತವೆ.


7) ಡೀಪ್ ವೆಯಿನ್ಸ್ ಥಾಂಬೋಸಿಸ್ – ಕೆಲವೊಮ್ಮೆ, ಉಬ್ಬಿರುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಕ್ಲಾಟ್
ಗಳು/ಗಂಟುಗಳು ಉಂಟಾಗುವ ಸಮಸ್ಯೆ ಇರುವ ಜನರಲ್ಲಿ, ಆಳವಾದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ
ಕಾಣಿಸುತ್ತದೆ, ನಿರ್ಬಂಧಿತವಾದ ರಕ್ತನಾಳಗಳು ಡೀಪ್ ವೇನ್ ಥಾಂಬೋಸಿಸ್ (ಡಿವಿಟಿ) ನಂತಹ ಮಾರಕ ಸ್ಥಿತಿಗಳಿಗೆ
ಕಾರಣವಾಗಬಹುದು. ಡಿವಿಟಿ ಸ್ಥಿತಿಯಲ್ಲಿ ಹೆಪ್ಪುಗಟ್ಟಿದ ರಕ್ತದಿಂದ ಬೇರೆಯಾದ ರಕ್ತದ ಕ್ಲಾಟ್ಗೆಡ್ಡೆ ಶ್ವಾಸಕೋಶಕ್ಕೆ ಚಲಿಸಿದಾಗ,
ಇದು ಪಲ್ಮನರಿ ಎಂಬಾಲಿಸಮ್ ಎಂಬ ಮಾರಣಾಂತಿಕ ಸ್ಥಿತಿಗೆ ಕಾರಣವಾಗುತ್ತದೆ.


ಪ್ರಯಾಣದ ಸಮಯದಲ್ಲಿ ಅಥವಾ ದೀರ್ಘಕಾಲದವರೆಗೆ ಕುಳಿತಿಕೊಳ್ಳಬೇಕಾದ ಸಮಯದಲ್ಲಿ ಉಬ್ಬಿರುವ ಸಣ್ಣ
ರಕ್ತನಾಳಗಳನ್ನು ಕಂಪ್ರೆಶನ್ ಸ್ಟಾಕಿಂಗ್ಸ್ /ಸಂಕೋಚನ ಸ್ಪಾಕಿಂಗ್ಸ್ ಧರಿಸಿ ಅವುಗಳ ಸಮಸ್ಯೆ ಬರದಂತೆ
ನೋಡಿಕೊಳ್ಳಬಹುದು ಎಂದು ತಿಳಿದಿರುವುದು ಬಹಳ ಮುಖ್ಯ. ಆದರೆ ರಕ್ತನಾಳಗಳು ದೊಡ್ಡದಾಗಿದ್ದಾಗ, ಅವುಗಳಿಂದ
ನೋವು, ಬಣ್ಣದಲ್ಲಿ ಬದಲಾವಣೆ ಮತ್ತು ಊತ ಕಾಣಿಸಿಕೊಳ್ಳುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕೆಂದು
ಸೂಚಿಸಲಾಗುತ್ತದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವ ಆರೋಗ್ಯ ಸಮಸ್ಯೆಯಾಗಿರುವುದರಿಂದ, ಚಿಕಿತ್ಸೆ ನೀಡದೆ
ಹೋದರ ಸ್ಥಿತಿ ಹದಗೆಡುವ ಸಂಭವವಿದೆ.

Varicose veins treatment in Bangalore | Mysore | Hubli | Hyderabad | Vijayawada | Visakhapatnam | Chennai | Coimbatore | Tirupati |

Shares
Follow us