ವೀನಸ್ ಅಲ್ಸರ್ಸ್/ಸಿರೆಯ ಹುಣ್ಣುಗಳು ಹುಣ್ಣುಗಳು ಹೇಗೆ ರೂಪುಗೊಳ್ಳುತ್ತವೆ?

Venous Ulcers

ಸಾಮಾನ್ಯ ಮನುಷ್ಯನ ದೇಹದಲ್ಲಿ ಅಪಧಮನಿಗಳು ಹೃದಯದಿಂದ ಆಮ್ಲಜನಕ ಮತ್ತು ಇತರೆ ಪೋಷಕಾಂಶಗಳು ತುಂಬಿದಂತಹ ರಕ್ತವನ್ನು ದೇಹದ ಇತರ ಅಂಗಗಳಿಗೆ ಕೊಂಡೊಯ್ಯುತ್ತವೆ ಮತ್ತು ಅಭಿಧಮನಿಗಳು/ರಕ್ತನಾಳಗಳು ಅದನ್ನು  ಹಿಂತಿರುಗಿ ಹೃದಯಕ್ಕೆ ಕೊಂಡೊಯ್ಯುತ್ತವೆ. ರಕ್ತನಾಳಗಳಿಗೆ ಹಾನಿಯಾದಾಗ ಹಾಗೂ ನಿಷ್ಕ್ರಿಯಗೊಂಡಾಗ ಪ್ರಕ್ರಿಯೆಗೆ ಅಡಚಣೆಯಾಗುತ್ತದೆ. ಕಾಲಿನ ರಕ್ತನಾಳಗಳಲ್ಲಿನ ಕವಾಟಗಳಿಗೆ ಹಾನಿಯಾದರೆ, ರಕ್ತನಾಳಗಳಲ್ಲಿ ರಕ್ತವು ಅವುಗಳಲ್ಲಿಯೇ ಉಳಿಯುತ್ತದೆ ಮತ್ತು ನಿಮ್ಮ ಕಾಲುಗಳಲ್ಲಿ ಶೇಖರಣೆಯಾಗುತ್ತದೆ/ಮಡುಗಟ್ಟುತ್ತದೆ. ಇದನ್ನು ವೀನಸ್ ನ /ಸಿರೆಯ ಕೊರತೆ ಎಂದು ಕರೆಯಲಾಗುತ್ತದೆ.

ನಿಮ್ಮ ಕಾಲುಗಳಲ್ಲಿನ ಅಸಮರ್ಪಕವಾದ ರಕ್ತ ಪರಿಚಲನೆಯಿಂದ,ಊತ ತುಂಬಾ ಹೆಚ್ಚಾಗಬಹುದು. ಇದು ನಿಮ್ಮ ಚರ್ಮದ ಮೇಲೆ ಎಷ್ಟು ಮಟ್ಟಿನ ಒತ್ತಡವನ್ನುಂಟು ಮಾಡಬಹುದೆಂದರೆ ಅದು ಅಂಗಾಂಶಗಳ ಕ್ಷೀಣತೆಗೆ/ಹಾಳಾಗುವುದಕ್ಕೆ ಕಾರಣವಾಗಬಹುದು ಮತ್ತು ನಂತರ ವೀನಸ್ ಅಲ್ಸರ್ಸ್/ಸಿರೆಯ ಹುಣ್ಣುಗಳು ಎಂದು ಕರೆಯಲಾಗುವ ಹುಣ್ಣುಗಳು ಉಂಟಾಗಬಹುದು. ವೀನಸ್/ಸಿರೆಯ ಹುಣ್ಣುಗಳು ಸಾಮಾನ್ಯವಾಗಿ ಮೊಣಕಾಲಿನ ಕೆಳಗೆ ಮತ್ತು ಪಾದದ ಒಳಭಾಗದಲ್ಲಿ ಕಂಡುಬರುತ್ತವೆ. ಉರಿಯೂತ, ಊತ, ನೋವು, ತುರಿಕೆ ಮತ್ತು ಸ್ರವಿಸುವಿಕೆ/ಜಿನುಗುವಿಕೆ ಇವು ಇದಕ್ಕೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳಾಗಿವೆ.

ಆರ್ಟೀರಿಯಲ್ ಇನ್ಸಫಿಶಿಯನ್ಸಿ/ಅಪಧಮನಿಯ ನ್ಯೂನ್ಯತೆ ಇಂದಾಗಿ ಆಮ್ಲಜನಕ-ಸಮೃದ್ಧವಾದ ರಕ್ತವನ್ನು ತುದಿಗೆ ಸಾಗಿಸುವುದರಲ್ಲಿ ಅಪಧಮನಿಗಳಿಗೆ ಅಡಚಣೆಯಾದಾಗ/ತಡೆಯಾದಾಗ ಚರ್ಮಕ್ಕೆ ಹಾನಿ ಮತ್ತು ಗುಣಪಡಿಸಲಾಗದ ಗಾಯಗಳಾಗಿ ಇದೇ ತರಹದ ಅಪಧಮನಿಯ ಹುಣ್ಣುಗಳಿಗೆ ಕಾರಣವಾಗುತ್ತದೆ. ಅಂತಹ ಅಪಧಮನಿಯ ಹುಣ್ಣುಗಳು ಹೆಚ್ಚಾಗಿ ಆಂಕಲ್/ಕಾಲಿನ ಹರಡು, ಪಾದ, ಹಿಮ್ಮಡಿ ಅಥವಾ ಕಾಲ್ಬೆರಳುಗಳ ಹೊರಭಾಗದಲ್ಲಿ ರೂಪುಗೊಳ್ಳುತ್ತವೆ ಮತ್ತು ಕೆಲವೊಮ್ಮೆ ನೋವಿನಿಂದ ಕೂಡಿರುತ್ತವೆ.

ಸಾಮಾನ್ಯವಾದ ಕೊಯ್ತ/ಛೇದನ ಅಥವಾ ಗಾಯ ಹೇಗೆ ವಾಸಿಯಾಗುತ್ತದೆ? ದೇಹದಲ್ಲಿ ಒಂದು ಕೊಯ್ತ/ಛೇದನ ಅಥವಾ ಗಾಯವಾದಾಗ ವಾಸಿ ಮಾಡುವ/ಗುಣಪಡಿಸುವ ಪ್ರಕ್ರಿಯೆ ತಕ್ಷಣ ಪ್ರಾರಂಭವಾಗುತ್ತದೆ. ಅಪಧಮನಿಗಳು ರಕ್ತವನ್ನು ಪೀಡಿತ ಭಾಗಕ್ಕೆ ಕೊಂಡೊಯುತ್ತವೆ ಮತ್ತು ರಕ್ತನಾಳಗಳು ಅಲ್ಲಿಂದ ರಕ್ತವನ್ನು ಹಿಂದಕ್ಕೆ ಸಾಗಿಸುತ್ತವೆ ಮತ್ತು ಕೆಂಪು ರಕ್ತ ಕಣಗಳು ಕೊಲ್ಲಾಜನ್ ರಚಿಸಲು ಸಹಾಯ ಮಾಡುತ್ತವೆ. ಗ್ರ್ಯಾನ್ಯುಲೇಷನ್ ಅಂಗಾಂಶವು ರೂಪುಗೊಳ್ಳುವುದರಿಂದ ಅದು ಗಾಯವನ್ನು ತುಂಬುತ್ತದೆ ಮತ್ತು ಚರ್ಮದ ಕೋಶಗಳು ಪುನರುತ್ಪಾದನೆಗೊಳ್ಳುತ್ತವೆ. ಆದರೆ ಅಪಧಮನಿಗಳು ಮತ್ತು ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಕಳಪೆ ರಕ್ತಪರಿಚಲನೆಯಿಂದಾಗಿ ದೇಹದ ಕೆಳಭಾಗದ ತುದಿಗಳಲ್ಲಿ ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭವಾಗುತ್ತದೆ. ರಕ್ತ ಶೇಖರಣೆಯಾಗಲು ಆರಂಭವಾಗುತ್ತದೆ ಮತ್ತು ಇದರಿಂದ ಆಮ್ಲಜನಕಯುಕ್ತ ರಕ್ತ ಗಾಯ ತಲುಪುವುದಕ್ಕೆ ತಡೆಯಾಗುತ್ತದೆ ಇದರಿಂದ ಮಾಯುವ/ಗುಣವಾಗುವ ಪ್ರಕ್ರಿಯೆ ನಿಲ್ಲುತ್ತದೆ. ಅಂತಹ ಸಣ್ಣ ಗುಣವಾಗದ ಗಾಯಗಳು ಕೆಲವೊಮ್ಮೆ ನಂತರದಲ್ಲಿ ಹುಣ್ಣುಗಳು ಎಂದು ಕರೆಯಲ್ಪಡುವ ದೊಡ್ಡ ತೆರೆದ ಗಾಯಗಳಾಗಿ ರೂಪಾಂತರಗೊಳ್ಳುತ್ತವೆ.

 ಕಳಪೆ ರಕ್ತಪರಿಚಲನೆಯ ಲಕ್ಷಣಗಳನ್ನು ನಾವು ಗುರುತಿಸಬಹುದೇ?

ಸಾಮಾನ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಅಪಧಮನಿ ಕಾಠಿಣ್ಯ, ವೆರಿಕೋಸ್ ವೇನ್ ಗಳು/ಉಬ್ಬಿರುವ ರಕ್ತನಾಳಗಳು ಮತ್ತು ಬೊಜ್ಜು ಮುಂತಾದ ಸಮಸ್ಯೆಗಳಿರುವ ವ್ಯಕ್ತಿಗಳು ಕೆಳಗಿನ ಕಳಪೆ ರಕ್ತಪರಿಚಲನೆಯ  ಚಿಹ್ನೆಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಸಲಹೆ ನೀಡಲಾಗುತ್ತದೆ.

  •  ದೇಹದ ಕೆಳ ತುದಿಗಳಲ್ಲಿ  ಊದಿಕೊಂಡ ರಕ್ತನಾಳಗಳು
  •   ಕಾಲು ಮತ್ತು ಪಾದಗಳಲ್ಲಿ ಭಾರವಾಗುವ ಅನುಭವ, ಕಾಲುಗಳ ಸ್ನಾಯುಗಳಲ್ಲಿ ನೋವು
  •   ಊದಿದ ಕೆಳಭಾಗದ ತುದಿಗಳು ಮತ್ತು / ಅಥವಾ ತುದಿಗಳಲ್ಲಿ ಜೋಮು ಹಿಡಿಯುವ ಅನುಭವ
  •   ಕೆಳ ತುದಿಗಳ ಚರ್ಮದಲ್ಲಿ ಕಲೆಗಳಾಗುವುದು ಮತ್ತು / ಅಥವಾ ತುರಿಕೆ ಮತ್ತು ದದ್ದುಗಳು
  •  ತುದಿಗಳು ತಣ್ಣಗಾಗುವುದು

ಅಸ್ತಿತ್ವದಲ್ಲಿರುವ ಕೆಲವು ವೈದ್ಯಕೀಯ ಪರಿಸ್ಥಿತಿಗಳು/ಆರೋಗ್ಯ ಸಮಸ್ಯೆಗಳು, ವೀನಸ್ ಅಲ್ಸರ್ /ಸಿರೆಯ ಹುಣ್ಣು ಉಂಟಾಗಲು ಸಂಭಾವ್ಯ ಕಾರಣಗಳಾಗಬಹುದು. ಅದು ಇವುಗಳನ್ನು ಒಳಗೊಂಡಿದೆ:

  • ವೆರಿಕೋಸ್ ವೇನ್ ಗಳು
  •  ಡೀಪ್ ವೇನ್ ಥ್ರಂಬೋಸಿಸ್ / ಇತರ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಗಳು
  •  ಸ್ಥೂಲಕಾಯತೆ/ಬೊಜ್ಜು
  •   ಗರ್ಭಾವಸ್ಠೆ/ಬಸಿರು
  •  ಗಾಯಗಳು / ಅಸ್ಥಿ ಭಂಗ/ಮೂಳೆಯ ಮುರಿತಗಳು

 ಹುಣ್ಣುಗಳ ಚಿಕಿತ್ಸೆ

ಅಪಧಮನಿಯ ಮತ್ತು ವೀನಸ್ ಅಲ್ಸರ್/ಸಿರೆಯ ಹುಣ್ಣು ಎರಡಕ್ಕೂ ವೈದ್ಯರು ತೊಂದರೆಯಾದ ಜಾಗದಲ್ಲಿ ರಕ್ತ ಪರಿಚಲನೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಾರೆ. ಪ್ರತಿಜೀವಕಗಳ ಬಳಕೆ ನೋವನ್ನು ಕಡಿಮೆ ಮಾಡುತ್ತದೆ, ಸೋಂಕನ್ನು ತಡೆಯುತ್ತದೆ ಮತ್ತು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಆದರೆ ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಾಗುವುದಿಲ್ಲ. ಬ್ಯಾಂಡೇಜ್ ಮತ್ತು ಕಂಪ್ರೆಶನ್ ತೆರಪಿ/ಸಂಕೋಚನ ಚಿಕಿತ್ಸೆಯು ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ.

ಮತ್ತೊಂದು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆಯೆಂದರೆ, ಅನಾರೋಗ್ಯಕರವಾದ ರಕ್ತನಾಳಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು. ಈ ವಿಧಾನದ ಮೂಲಕ ರಕ್ತದ ಹರಿವನ್ನು ಆರೋಗ್ಯಕರ ರಕ್ತನಾಳಗಳಿಗೆ ತಿರುಗಿಸಲಾಗುತ್ತದೆ. ಅದರಿಂದ ಹೆಚ್ಚಾಗಿರುವ ಒತ್ತಡವು ಕಡಿಮೆಯಾಗುತ್ತದೆ ಮತ್ತು ಹುಣ್ಣುಗಳು ಮತ್ತೆ ಮರುಕಳಿಸುವುದಿಲ್ಲ.

ಇತ್ತೀಚಿನ ತಂತ್ರಜ್ಞಾನದ ಪ್ರಗತಿಗಳಿಂದ ಎಂಡೋವೆನಸ್ ಲೇಸರ್ ಅಬ್ಲೇಶನ್ ಎಂಬ ತಂತ್ರವನ್ನು ಪರಿಚಯಿಸಲಾಗಿದೆ, ಇದು ಹುಣ್ಣುಗಳಿಗೆ ಅತ್ಯಾಧುನಿಕ ಚಿಕಿತ್ಸೆಯ ಆಯ್ಕೆಯಾಗಿದೆ.ಈ ಕಾರ್ಯವಿಧಾನವು ಕನಿಷ್ಠ ಆಕ್ರಮಣಶೀಲವಾಗಿದೆ ಮತ್ತು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ.