ಮಧುಮೇಹ ಸಂಬಂಧಿತ ಪಾದದ ಹುಣ್ಣುಗಳು/ಡಯಾಬಿಟಿಕ್ ಫುಟ್ಅಲ್ಸರ್ಸ್ :

ಡಯಾಬಿಟಿಸ್ ಮೆಲ್ಲಿಟಸ್ ಆರೋಗ್ಯ ಸಮಸ್ಯೆ ಇರುವ ರೋಗಿಗಳಲ್ಲಿ ಸಾಮಾನ್ಯವಾಗಿ ತುಂಬಾ ಹೆಚ್ಚು ಕಂಡು ಬರುವ ತೊಂದರೆ ಎಂದರೆ ಮಧುಮೇಹಕ್ಕೆ ಸಂಬಂಧಿಸಿದ ಪಾದದ ಹುಣ್ಣುಗಳು. ಈ ಸಮಸ್ಯೆಯನ್ನು ಕೇವಲ ಆಹಾರ, ವ್ಯಾಯಾಮ ಅಥವಾ ಇನ್ಸುಲಿನ್ ಚಿಕಿತ್ಸೆಯ ಮೂಲಕ ಸರಿಯಾಗಿ ನಿಯಂತ್ರಿಸಲಾಗುವುದಿಲ್ಲ.

ಪಾದದ ಹುಣ್ಣು ಬರಲು ಹೇಗೆ ಮಧುಮೇಹ ಕಾರಣವಾಗಬಹುದು?

ಮಧುಮೇಹಿ ರೋಗಿಗಳಲ್ಲಿ, ರಕ್ತ ಪರಿಚಲನೆಯು ಹೆಚ್ಚು ಸಮರ್ಪಕವಾಗಿರುವುದಿಲ್ಲ ಮತ್ತು ಪಾದಗಳು ಹೃದಯದಿಂದ ದೂರದಲ್ಲಿರುವ ಕಾರಣದಿಂದ ಅವುಗಳ ತುದಿಗಳಲ್ಲಿನ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು ಸಂಗ್ರಹವಾಗುತ್ತಾ ಹೋಗಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದರಿಂದ ಹತ್ತಿರದ ನರಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದ ಕಾರಣದಿಂದ ಅವುಗಳು ಹಾನಿಗೊಳಗಾಗಬಹುದು. ಹೀಗೆ ಪಾದದ ಮೇಲೆ ಒಂದು ಹುಣ್ಣು ಕಾಣಿಸಿಕೊಳ್ಳಬಹುದು, ಮುಂದೆ ಅದು ವಿಶೇಷವಾಗಿ ಬದಿಗಳಲ್ಲಿ ಅಥವಾ ಕೆಳಭಾಗದಲ್ಲಿ ತೆರೆದ ಗಾಯವಾಗಬಹುದು. ಈ ಹುಣ್ಣುಗಳು ಚರ್ಮದ ಅಂಗಾಂಶಗಳನ್ನು ತೂರಿಕೊಂಡು ಮುಂದುವರೆಯುತ್ತವೆ ಮತ್ತು ಕೆಳಗಿನ ಪದರಗಳಿಗೂ ಹರಡಿ, ಮತ್ತು ಸ್ನಾಯುಗಳು ಮತ್ತು ಸಂಯೋಜಕ ಅಂಗಾಂಶಗಳನ್ನು ನಾಶಮಾಡುತ್ತವೆ.

ಹುಣ್ಣು ಬರಲು ಕಾರಣವಾಗುವ ಅಪಾಯಗಳನ್ನು ಕಡಿಮೆ ಮಾಡಲು- ಪಾದದ ನೈರ್ಮಲ್ಯ, ಕಾಲು ಮತ್ತು ಉಗುರುಗಳ ಆರೈಕೆ ಮತ್ತು ಸರಿಯಾದ ಪಾದರಕ್ಷೆಗಳನ್ನು ಧರಿಸುವುದರ ಬಗ್ಗೆ ರೋಗಿಗೆ ತಿಳುವಳಿಕೆ ನೀಡುವುದು ಅತ್ಯಗತ್ಯ.

ಪ್ರಾಥಮಿಕ ಕಾರಣಗಳು

ಪೆರಿಫರಲ್ ನ್ಯೂರೋಪತಿ (ನರ ಹಾನಿ) ಮತ್ತು ಬಾಹ್ಯ ಅಪಧಮನಿಯ ಕಾಯಿಲೆಯಿಂದ ರಕ್ತದ ಪರಿಚಲನೆಯಲ್ಲಿ ಆಗುವ ಕೊರತೆ/ವ್ಯತ್ಯಯ, ಇವು ಮಧುಮೇಹ ಪಾದದ ಹುಣ್ಣುಗಳು ಬರಲು ಪ್ರಾಥಮಿಕ ಕಾರಣಗಳಾಗಿವೆ. ಮಧುಮೇಹದ ರೋಗಿಗಳು ಮರಗಟ್ಟುವಿಕೆ ಮತ್ತು ಸೋಂಕಿತ ಜಾಗದ ಸುತ್ತ ಸಂವೇದನೆಯ ಕೊರತೆಯ ಬಗ್ಗೆ ದೂರು ನೀಡುವುದನ್ನು ನೀವು ಕೇಳಿರಬಹುದು. ದೀರ್ಘಕಾಲದ ರಕ್ತದಲ್ಲಿಯ ಅಧಿಕ ಸಕ್ಕರೆಯ ಪ್ರಮಾಣದಿಂದ ಮೋಟಾರ್, ಸೆನ್ಸರಿ ಮತ್ತು ಆಟೋನಾಮಿಕ್/ಸ್ವನಿಯಂತ್ರಿತ ನರಗಳೂ ಸೇರಿದಂತೆ ನರಗಳಿಗೆ ಹಾನಿಯಾಗುತ್ತದೆ. ಸಾಮಾನ್ಯವಾಗಿ ಪಾದಗಳಿಂದ ಮೆದುಳಿಗೆ ನೋವಿನ ಸಂವೇದನೆಯನ್ನು ಸಾಗಿಸುವ ಸಂವೇದನಾ/ಸೆನ್ಸರಿ ನರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ನಿಮ್ಮ ಪಾದಕ್ಕೆ ಆಗುವ ಹಾನಿಗಳು ಗಮನಕ್ಕೆ ಬಾರದೆ ಇರುವ ಸಾಧ್ಯತೆಯಿದೆ. ಈ ಹಾನಿಯಿಂದ ತೊಂದರೆ ಇರುವ ಜಾಗದಲ್ಲಿ ಸಂವೇದನೆಯ ಅನುಭವದ ನಾಶಕ್ಕೆ ಕಾರಣವಾಗಬಹುದು. ಹೀಗಾಗಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹಾನಿಗೊಳಗಾಗುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.

ಬಾಹ್ಯ ಅಪಧಮನಿ ರೋಗವು ನಾಳೀಯ ರೋಗದ ಒಂದು ರೂಪವಾಗಿದ್ದು, ಇದರಲ್ಲಿ ನಿಮ್ಮ ಪಾದಗಳಿಗೆ ಹರಿಯುವ ರಕ್ತದ ಪರಿಚಲನೆ ಪರಿಣಾಮಕಾರಿಯಾಗಿ ಇರುವುದಿಲ್ಲ. ಈ ಕಳಪೆ ರಕ್ತಪರಿಚಲನೆಯಿಂದ ಹುಣ್ಣುಗಳು ಮಾಯುವುದು/ಗುಣವಾಗುವುದು ಹೆಚ್ಚು ಕಷ್ಟಕರವಾಗಬಹುದು.

ಮಧುಮೇಹ ಪಾದದ ಹುಣ್ಣುಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳು

ಮಧುಮೇಹಿಗಳಿಗೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಸಮಸ್ಯೆಗಳಿದ್ದರೆ ಪಾದದ ಹುಣ್ಣುಗಳು ಬರುವ ಹೆಚ್ಚಿನ ಅಪಾಯವಿದೆ:

ಈ ಮೊದಲು ಉಬ್ಬಿರುವ ರಕ್ತನಾಳಗಳ ಸಮಸ್ಯೆಯ ಇತಿಹಾಸವಿದ್ದರೆ

ಪೆರಿಫರಲ್ ಆರ್ಟರಿ ಡಿಸೀಸ್/ ಬಾಹ್ಯ ಅಪಧಮನಿಯ ರೋಗ

  • ಪಾದಗಳಲ್ಲಿ ಆಣಿಗಳು ಮತ್ತು ಚರ್ಮ ಗಟ್ಟಿಯಾಗಿದ್ದರೆ/ಜಡ್ಡುಗಟ್ಟಿದ್ದರೆ
  • ಅತಿಯಾಗಿ ಒಣಗಿದ ಚರ್ಮ
  • ಚಲನೆ ಇಲ್ಲದೇ ಇರುವುದು
  • ರಕ್ತದಲ್ಲಿ ಅಧಿಕ ಗ್ಲೂಕೋಸ್ ಪ್ರಮಾಣ
  • 10 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಮಧುಮೇಹ ಸಮಸ್ಯೆಯ ಇತಿಹಾಸವಿದ್ದರೆ
  • ಕಾಲು ಅಥವಾ ಕೈಕಾಲಿನ ಅಂಗಚ್ಛೇದನ

ಮಧುಮೇಹ ಪಾದದ ಹುಣ್ಣುಗಳ ಚಿಕಿತ್ಸೆ

ನಿಮ್ಮ ಚರ್ಮದಲ್ಲಿ ಯಾವುದೇ ಹುಣ್ಣು ಅಥವಾ ಬದಲಾವಣೆಗಳನ್ನು ನೀವು ಗಮನಿಸಿದರೆ, ತಪ್ಪದೆ ತಕ್ಷಣವೇ ಇದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಡಿಬ್ರಿಡೆಮೆಂಟ್ ಎಂಬ ಕಾರ್ಯವಿಧಾನದಿಂದ ಗಾಯದಲ್ಲಿರುವ ಅನಾರೋಗ್ಯಕರ ಅಂಗಾಂಶಗಳನ್ನು ತೆಗೆದುಹಾಕಬಹುದು ಮತ್ತು ಉಳಿದ ಅಂಗಾಂಶಗಳ ಗುಣವಾಗುವ ಸಾಮರ್ಥ್ಯವನ್ನು ಸುಧಾರಿಸಬಹುದು. ಹುಣ್ಣುಗಳು ಸೋಂಕಿಗೆ ಒಳಗಾಗುವುದನ್ನು ಅಥವಾ ದೊಡ್ಡದಾಗಿ ಬೆಳೆಯುವುದನ್ನು ತಡೆಯಲು ವೈದ್ಯರು ಇತರ

ವಿಧಾನಗಳನ್ನು ಶಿಫಾರಸು ಮಾಡಬಹುದು, ಅದು ಇವುಗಳನ್ನು ಒಳಗೊಂಡಿರಬಹುದು:

  • ಪ್ರತಿದಿನ ಹುಣ್ಣುಗಳನ್ನು ಶುಚಿಗೊಳಿಸುವುದು: ಬೇರೆ ಯಾವ ವಿಧಾನವನ್ನು ಶಿಫಾರಸು ಮಾಡದೆ ಇದ್ದರೆ, ಸಾಬೂನು ಮತ್ತು ನೀರಿನಿಂದ ಹುಣ್ಣನ್ನು ನಿಧಾನವಾಗಿ/ಹಗುರಾಗಿ ಸ್ವಚ್ಛಗೊಳಿಸಿ.
  •  ಗಾಯದ ಡ್ರೆಸ್ಸಿಂಗ್ ಅಥವಾ ಬ್ಯಾಂಡೇಜ್ ಅನ್ನು ಬಳಸಿ ಹುಣ್ಣನ್ನು ಮುಚ್ಚವುದು, ಇದು ಸೋಂಕು ಉಂಟಾಗುವ ಮತ್ತು ಗಾಯ ಮಾಯುವುದು ನಿಧಾನವಾಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
  • ಊರುಗೋಲುಗಳು, ಕಟ್ಟುಪಟ್ಟಿಗಳು ಅಥವಾ ವಿಶೇಷ ಪಾದರಕ್ಷೆಗಳನ್ನು ಬಳಸಬೇಕಾಗಿ ಬರುವ ಜಾಗದಲ್ಲಿರುವ ಹುಣ್ಣುಗಳ ಮೇಲೆ ನೇರವಾಗಿ ಹಾಕುವ ಒತ್ತಡವನ್ನು ಕಡಿಮೆ ಮಾಡುವುದು.
  • ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.

ನಿಮ್ಮ ಗಮನಕ್ಕೆ ಏನಾದರೂ ಕಂಡು ಬಂದು, ಅದು ಸಹಜವೋ ಅಲ್ಲವೊ ಎನ್ನುವ ಅನುಮಾನವಾದರೆ, ತಡಮಾಡದೆ ನಿಮ್ಮ ವೈದ್ಯರಿಗೆ ಕರೆ ಮಾಡಿ. ಅವಿಸ್ ನಾಳೀಯ ಕೇಂದ್ರದಲ್ಲಿರುವ ನಮ್ಮ ವೈದ್ಯರುಗಳು ಈ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ ಮತ್ತು ಅವರು ನಿಮ್ಮ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ಸೂಕ್ತ ಚಿಕಿತ್ಸೆಯ ಆಯ್ಕೆಗಳನ್ನು ಶಿಫಾರಸು ಮಾಡಬಹುದು.

Foot ulcer Treatment In Hyderabad | Vijayawada | Visakhapatnam | Chennai

For Appointment Call: 9989527715,7847045678