ನಿಮ್ಮ ಏರ್ ಕಂಡಿಷನರ್ ಕೆಲಸ ಮಾಡುತ್ತಿಲ್ಲ. ಅದನ್ನು ಸರಿಪಡಿಸಲು ನೀವು ಪ್ಲಂಬರ್ ಅನ್ನು ಕರೆಯುತ್ತೀರಾ? ಇಲ್ಲ ಅಲ್ಲವೇ. ಹಾಗೆಯೇ, ನಿಮಗೆ ನಿಮ್ಮ ರಕ್ತನಾಳಗಳಲ್ಲಿ ಸಮಸ್ಯೆಗಳು ಉಂಟಾದರೆ, ಆ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಪರಿಹರಿಸುವ ವೈದ್ಯರನ್ನು ನೀವು ಏಕೆ ಹುಡುಕುವುದಿಲ್ಲ? ನಿಮ್ಮ ಒಳಗಿರುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡಿಸಲು ಅಗತ್ಯವಾದ ಅನುಭವ, ತರಬೇತಿ ಮತ್ತು ಬೋರ್ಡ್ ಪ್ರಮಾಣೀಕರಣವನ್ನು ಹೊಂದಿರುವ ವೈದ್ಯರನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.
ರಕ್ತನಾಳದ ರೋಗಗಳಿಗೆ ಯಾರು ಚಿಕಿತ್ಸೆ ನೀಡುತ್ತಾರೆ?
ಹೆಚ್ಚಿನ ನಾಳೀಯ/ರಕ್ತನಾಳಗಳ ವೈದ್ಯರುಗಳು ಸಮಗ್ರವಾದ ತರಬೇತಿಯನ್ನು ಪಡೆದಿರುತ್ತಾರೆ ಮತ್ತು ಅಂತಹ ಆರೋಗ್ಯ ಸಮಸ್ಯೆಗಳಿಗೆ/ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಅರ್ಹರಾಗಿರುತ್ತಾರೆ. ಆದರೆ ಎಲ್ಲಾ ವೈದ್ಯರುಗಳೂ ಅದೇ ರೀತಿಯ ಸಂಪೂರ್ಣವಾದ ತರಬೇತಿಯನ್ನು ಪಡೆದಿರುವುದಿಲ್ಲ ಹಾಗೂ ನಿಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರಮುಖ ಭಾಗವಾದ ರಕ್ತನಾಳಗಳ ಚಿಕಿತ್ಸೆಯ ಬಗ್ಗೆ ಅನೇಕರಿಗೆ ಅನುಭವವಿರುವುದಿಲ್ಲ.
ಹಾಗಾಗಿ ನನ್ನ ನಾಳೀಯ/ರಕ್ತನಾಳಗಳ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉತ್ತಮ ವೈದ್ಯರನ್ನು ನಾನು ಹೇಗೆ ಕಂಡುಹಿಡಿಯುವುದು?
ನಿಮ್ಮ ಸಮೀಪದಲ್ಲಿ ಇರುವ ಉತ್ತಮ ನಾಳೀಯ/ರಕ್ತನಾಳಗಳ ವೈದ್ಯರ ಹುಡುಕಾಟದಲ್ಲಿ ನೀವಿರುವಾಗ, ಚರ್ಮರೋಗ ತಜ್ಞರು, ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ಗಳು, ನಾಳೀಯ ಶಸ್ತ್ರಚಿಕಿತ್ಸಕರು ಮತ್ತು ಇತರ ತಜ್ಞರು ಕೂಡಾ ರಕ್ತನಾಳಗಳಿಗೆ ಚಿಕಿತ್ಸೆ ನೀಡುವುದನ್ನು ನೀವು ಗಮನಿಸಿರಬಹುದು. ಹಾಗಿದ್ದಾಗ ಯಾರನ್ನು ಸಂಪರ್ಕಿಸಬೇಕು ಎನ್ನುವ ನಿರ್ಧಾರವನ್ನು ನೀವು ಹೇಗೆ ಮಾಡುತ್ತೀರಿ? ಹೀಗೆ ನೀವು ಹುಡುಕುವಾಗ ನೀವು ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
I. ವೈದ್ಯರ ರುಜುವಾತುಗಳು ಮತ್ತು ಅನುಭವ
ವೈದ್ಯರ ರುಜುವಾತುಗಳನ್ನು ಮತ್ತು ನಾಳೀಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಅವರ ಅನುಭವದ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಅವರು ಎಷ್ಟು ವರ್ಷಗಳಿಂದ ವೇನ್/ರಕ್ತನಾಳಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು ಅವರು ತಮ್ಮ ವೃತ್ತಿಜೀವನದಲ್ಲಿ ಎಷ್ಟು ವೇನ್/ರಕ್ತನಾಳಗಳ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

II. “ಬೋರ್ಡ್ ಸರ್ಟಿಫೈಡ್/ ಬೋರ್ಡ್-ಪ್ರಮಾಣೀಕೃತ ” ವೈದ್ಯರುಗಳ ಸೇವೆ
ಬೋರ್ಡ್-ಪ್ರಮಾಣೀಕೃತ ನಾಳೀಯ ಶಸ್ತ್ರಚಿಕಿತ್ಸಕ ಅಂದರೆ ಯಾರು?
ನಾಳೀಯ ಶಸ್ತ್ರಚಿಕಿತ್ಸಕರು ಕನಿಷ್ಠ ಐದು ವರ್ಷ ಅವಧಿಯ ಅಧ್ಯಯನವನ್ನು ಪೂರ್ಣಗೊಳಿಸುತ್ತಾರೆ, ಮತ್ತು ಅನೇಕರು ರಕ್ತಪರಿಚಲನಾ ವ್ಯವಸ್ಥೆಯ ಮೇಲೆಯೇ ಕೇಂದ್ರೀಕೃತವಾದಂತಹ ಶಸ್ತ್ರಚಿಕಿತ್ಸಾ ತರಬೇತಿಯನ್ನು ಹಲವಾರು ವರ್ಷಗಳ ಕಾಲ ಮಾಡಿರುತ್ತಾರೆ.
ಈ ಪರಿಣಿತರು ರಕ್ತಪರಿಚಲನಾ ವ್ಯವಸ್ಥೆಗೆ ಚಿಕಿತ್ಸೆ ನೀಡುವ ವಿವಿಧ ರೀತಿಯ ಕಾರ್ಯವಿಧಾನಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ, ಅದರಲ್ಲಿ ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನಗಳು ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳೂ ಸೇರಿದಂತೆ ನಾಳೀಯ ಆರೈಕೆಯ ಎಲ್ಲಾ ಅಂಶಗಳ ಬಗ್ಗೆ ತರಬೇತಿ ಪಡೆದಿರುತ್ತಾರೆ.
ಬೋರ್ಡ್-ಪ್ರಮಾಣೀಕೃತ ನಾಳೀಯ ಶಸ್ತ್ರಚಿಕಿತ್ಸಕರಿಂದ ಚಿಕಿತ್ಸೆಯನ್ನು ಪಡೆಯುವುದರಿಂದ ನಿಮಗೆ ಲಭ್ಯವಿರುವ ವಿವಿಧ ಅಭಿಧಮನಿ ಚಿಕಿತ್ಸಾ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ನಿಮ್ಮ ನಿರ್ದಿಷ್ಟ ಸ್ಥಿತಿಯನ್ನು ಆಧರಿಸಿ ಅವರು ಚಿಕಿತ್ಸೆಯ ಯೋಜನೆಯನ್ನು ಗ್ರಾಹಕೀಯಗೊಳಿಸಬಹುದು.
ಬೋರ್ಡ್ ಪ್ರಮಾಣೀಕರಣವು ಎಲ್ಲಾ ಜ್ಞಾನ, ಅನುಭವಗಳು ಮತ್ತು ಕೌಶಲ್ಯಗಳನ್ನು ಒಟ್ಟುಗೂಡಿಸಿದ ನಂತರ ಮತ್ತು ಎಲ್ಲಾ ಸಮಗ್ರ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ದೊರೆಯುವ ಒಂದು ಪ್ರತಿಷ್ಠಿತ ಪದನಾಮವಾಗಿದೆ.
III. ಕ್ಲಿನಿಕ್ ನಲ್ಲಿ ಲಭ್ಯವಿರುವ ಸೌಲಭ್ಯಗಳು
* ನಿಮ್ಮ ಚಿಕಿತ್ಸೆಗೆ ನಿಖರವಾದ ರೋಗನಿರ್ಣಯವು ಅತ್ಯಂತ ಅವಶ್ಯಕವಾಗಿದೆ.
* ನಿಮ್ಮ ಸ್ಥಿತಿಯನ್ನು ನಿಖರವಾಗಿ ಪತ್ತೆಹಚ್ಚಲು ನಿಮ್ಮ ವೈದ್ಯರು ಮಾನ್ಯತೆ ಪಡೆದ ಲ್ಯಾಬ್ ಸೌಲಭ್ಯಕ್ಕೆ ಸಂಯೋಜಿತರಾಗಿದ್ದಾರೆಯೇ?
* ವಿವಿಧ ಚಿಕಿತ್ಸಾ ವಿಧಾನಗಳನ್ನು ನಿರ್ವಹಿಸಲು ಮತ್ತು ರಕ್ತನಾಳಗಳ/ವೇನ್ ಗಳ ವಿವಿಧ ಪರಿಸ್ಥಿತಿಗಳನ್ನು ನಿರ್ವಹಿಸಲು ಬೇಕಾದ ಪರ್ಯಾಯ ತಂತ್ರಜ್ಞಾನಗಳನ್ನು ಆ ಪ್ರಯೋಗಾಲಯ ಹೊಂದಿದೆಯೇ?
* ರಕ್ತನಾಳಗಳ/ವೇನ್ಗಳ ಅಲ್ಟ್ರಾಸೌಂಡ್ ಮತ್ತು ರೋಗಗಳಲ್ಲಿ ಪರಿಣತಿ ಹೊಂದಿರುವ ಅರ್ಹ ಅಲ್ಟ್ರಾಸೋನೋಗ್ರಾಫರ್ ಕ್ಲಿನಿಕ್ ನಲ್ಲಿ ಇದ್ದಾರೆಯೇ?
* ಈ ಕ್ಲಿನಿಕ್ ಮಾನ್ಯತೆಯನ್ನು ಹೊಂದಿದೆಯೇ ಮತ್ತು ಇದು ವೇನ್/ ರಕ್ತನಾಳಗಳ ರೋಗನಿರ್ಣಯ ಮತ್ತು ಆರೈಕೆಯಲ್ಲಿ ಉತ್ತಮ ಅಭ್ಯಾಸಗಳ ಭರವಸೆ ನೀಡುತ್ತದೆಯೇ?
IV. ಚಿಕಿತ್ಸೆ ಪಡೆದ ಫಲಾನುಭವಿಗಳ ಶಿಫಾರಸುಗಳು
ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು, ಅಥವಾ ಇದರ ಬಗ್ಗೆ ಮೊದಲೇ ಅನುಭವವಿರುವವರು ಮಾಹಿತಿಯ ಉತ್ತಮ ಮೂಲವಾಗಿರುತ್ತಾರೆ ಮತ್ತು ವೈದ್ಯರು ಮತ್ತು ಕ್ಲಿನಿಕ್ ಬಗ್ಗೆ ಅವರಲ್ಲಿರುವ ನಂಬಿಕೆಯ ಆಧಾರದ ಮೇಲೆ ನೀವು ನಿರ್ಧಾರ ಮಾಡಬಹುದು.
ನೀವು ವಿವೇಚನೆಯಿಂದ ನಿಮ್ಮ ವೈದ್ಯರನ್ನು ಆಯ್ಕೆ ಮಾಡಿದರೆ, ಅದೃಷ್ಟದಿಂದ ಇತ್ತೀಚಿನ ಎಲ್ಲಾ ಬೆಳವಣಿಗೆಯಿಂದ ಲಭ್ಯವಿರುವ ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಇದು ನಿಮಗೆ ಚಿಕಿತ್ಸೆಯ ನಂತರ ಕ್ಲಿನಿಕ್ ನಿಂದ ನೀವು ಹೊರನಡೆಯಲು ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಲು ನಿಮಗೆ ಸಹಾಯ ಮಾಡುತ್ತದೆ.
ನಾಳಿಯ/ಅಭಿಧಮನಿ ಸಂಬಂಧಿತ ಅಸ್ವಸ್ಥತೆಗಳ ಚಿಕಿತ್ಸೆಯ ವಿವರಗಳಿಗಾಗಿ , ಎವಿಸ್ ನಾಳೀಯ ಕೇಂದ್ರದಲ್ಲಿ ನಮ್ಮ ತಜ್ಞರನ್ನು ಸಂಪರ್ಕಿಸಿ.
Varicose Veins Treatment in Bangalore | Hyderabad Mysore | Visakhapatnam | Vijayawada | Chennai |Coimbatore | Tirupati | Rajahmundry | Kolkata | Madurai
For Appointment Call
Telangana: 9989527715
Andhra Pradesh: 9989527715
Tamilnadu: 7847045678
Karnataka: 8088837000
Kolkata: 9154089451