ಒಂದೇ ಜಾಗದಲ್ಲಿ ಕುಳಿತು/ನಿಂತು ಮಾಡುವ ಉದ್ಯೋಗಗಳು ನಿಮ್ಮನ್ನು ಹೇಗೆ ವೆರಿಕೋಸ್ ವೇನ್ ನ ಸಮಸ್ಯೆ ಹೆಚ್ಚಾಗುವಂತಹ ಅಪಾಯದ ಸ್ಠಿತಿಗೆ ಕೊಂಡೊಯ್ಯುತ್ತವೆ ?

Varicose veins treatment in Bangalore and Hubli

ನಿಮಗೆ ಈಗಾಗಲೇ ತಿಳಿದಿರುವಂತೆ, ವೆರಿಕೋಸ್ ವೇನ್ ಗಳ ಸಮಸ್ಯೆ ಕೇವಲ ಅನುವಂಶಿಕ ಮಾತ್ರವಲ್ಲದೆ ಜೀವನ ಶೈಲಿಯಿಂದ ಉಂಟಾಗುವ ತೊಂದರೆಯೂ ಹೌದು. ಹೋಲಿಸಿ ನೋಡಿದರೆ ದಿನದಲ್ಲಿ ನಾಲಕ್ಕು ಗಂಟೆಗಿಂತಲೂ ಹೆಚ್ಚು ಕಾಲ ನಿಲ್ಲುವಂತಹ ಜನರಲ್ಲಿ, ಉದಾಹರಣೆಗೆ ಶಿಕ್ಷಕರು, ವೈದ್ಯರು,ಟ್ರಾಫಿಕ್ ಪೋಲಿಸ್ ಅಧಿಕಾರಿಗಳು ಮತ್ತು ಸೆಕ್ಯುರಿಟಿ ಗಾರ್ಡ್ ಇಂತಹ ಉದ್ಯೋಗದಲ್ಲಿ ಇರುವವರಿಗೆ ವೆರಿಕೋಸ್ ವೇನ್ ಗಳ ತೊಂದರೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ.

ಅಷ್ಟೇ ಅಲ್ಲದೆ, ಒಂದೇ ಜಾಗದಲ್ಲಿ ದೀರ್ಘ ಕಾಲ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೂ ಕೂಡ ಸಣ್ಣ ವಯಸ್ಸಿನಲ್ಲಿಯೇ ವೆರಿಕೋಸ್ ವೇನ್ ನ ತೊಂದರೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಉದಾಹರಣೆಗೆ, ಕಚೇರಿ ಮುಂಭಾಗದ ಮೇಜಿನ ಉದ್ಯೋಗಿಗಳು,ರಿಸೆಪ್ಷನಿಸ್ಟ್ ಗಳಾಗಿ ಕೆಲಸ ಮಾಡುವವರು,ಮತ್ತು ವಿಶೇಷವಾಗಿ ಐಟಿ ಉದ್ಯೋಗಿಗಳು ಸೀಮಿತ ದೈಹಿಕ ಚಟುವಟಿಕೆಯಿಂದಾಗಿ ಸರಾಗವಲ್ಲದ ರಕ್ತದ ಹರಿವಿನ ತೊಂದರೆಯಿಂದ ಬಳಲುತ್ತಾರೆ ಮತ್ತು ಇದು ವೆರಿಕೋಸ್ ವೇನ್ ನ ತೊಂದರೆ ಉಂಟಾಗಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಕಂಪ್ಯೂಟರ್ ಗಳ ಆಗಮನದಿಂದ ಹಿಡಿದು ಇವತ್ತೂ ಸಹ ಐಟಿ ಕ್ಷೇತ್ರ ಪ್ರವರ್ಧಮಾನದಲ್ಲಿದೆ. ಅಲ್ಲಿ ದೊರೆಯುವ ಉತ್ತಮ ಸಂಬಳದ ಪ್ಯಾಕೇಜ್ ಗಳು ಮತ್ತು ಸುಧಾರಿತ ಜೀವನ ಶೈಲಿಯಿಂದಾಗಿ ಹೆಚ್ಚುಹೆಚ್ಚು ಜನರು ಐಟಿ ಉದ್ಯೋಗಿಗಳಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಸಮೃದ್ಧ ಜೀವನದ ಅನ್ವೇಷಣೆಯಲ್ಲಿ , ಐಟಿ ಉದ್ಯೋಗಿಗಳು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಗಡುವಿನೊಳಗೆ ಕೆಲಸ ಮುಗಿಸುವ ಅಪಾರ ಒತ್ತಡ ಮತ್ತು ಸಹೋದ್ಯೋಗಿಗಳಿಗಿಂತ ಉತ್ತಮವಾಗಿರಲು ಸತತವಾದ ಪೈಪೋಟಿ ಈ ಗುಣಲಕ್ಷಣಗಳಿರುವ ಅವರ ಮೇಜ ಮುಂದಿನ ಕೆಲಸ ಮತ್ತು ಒತ್ತಡದ ಕೆಲಸದ ವಾತಾವರಣದಿಂದ ಅವರು ಒಂದು ರೀತಿ ಆರೊಗ್ಯದೊಡನೆ ರಾಜಿ ಮಾಡಿಕೊಳ್ಳುಬೇಕಾಗುತ್ತದೆ.

ಕಂಪ್ಯೂಟರ್/ಲ್ಯಾಪ್ ಟಾಪ್ ನಲ್ಲಿ ಕೆಲಸ,ಪ್ರೆಸೆಂಟೇಶನ್ ಗಳನ್ನು ಸಿದ್ಧಪಡಿಸುವುದು, ಸಭೆಗಳಿಗೆ ಹಾಜರಾಗುವುದು,ಸೆಮಿನಾರ್ ಗಳನ್ನು ನಡೆಸುವುದು,ಮತ್ತು ಅಂತರ ರಾಷ್ಟ್ರೀಯ ಸಮ್ಮೇಳನಗಳಿಗಾಗಿ ದೀರ್ಘ ವಿಮಾನಯಾನಗಳನ್ನು ಕೈಗೊಳ್ಳುವುದು ಇವುಗಳು ಐಟಿ ಉದ್ಯೋಗಿಗಳು ಮೇಜಿನ ಮುಂದೆ ಯಾವುದೇ ಚಲನೆಯಿಲ್ಲದೆ ಗಂಟೆಗಳ ಕಾಲ ಕಳೆಯುವ ಹಲವಾರು ಉದಾಹರಣೆಗಳಲ್ಲಿ ಕೆಲವು.

ಸೀಮಿತ ದೈಹಿಕ ಚಟುವಟಿಕೆಯ ಈ ಸನ್ನಿವೇಶಗಳನ್ನು ಹೊರತುಪಡಿಸಿ, ಐಟಿ ಉದ್ಯೋಗಿಗಳು ಆಗಾಗ್ಗೆ ಸವಾಲಿನ ಕೆಲಸಗಳನ್ನು ಎದುರಿಸುತ್ತಾರೆ ಮತ್ತು ಯೋಜನೆಗಳ ವಿತರಣೆ ಮತ್ತು ಗ್ರಾಹಕರ ಸಭೆಗಳಿಗಿಂತ ಮುಂಚೆ ಕೊನೆಯ ಘಳಿಗೆಯಲ್ಲಿ ಹಲವಾರು ತೊಂದರೆಗಳಿರುತ್ತವೆ. ಕೆಲಸದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ, ಉತ್ತಮವಾಗಿ ಕಾರ್ಯ ನಿರ್ವಹಿಸುವ ಸತತ ಒತ್ತಡ, ಮತ್ತು ನಿಯಮಿತವಾಗಿ ಉದ್ಯೋಗ ಕಡಿತ ಮಾಡುವ ಪ್ರಮುಖ ಐಟಿ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭಯ ಇವುಗಳು ಐಟಿ ಉದ್ಯೋಗಿಗಳಿಗೆ ಇನ್ನೂ ಹೆಚ್ಚಿನ ಒತ್ತಡವನ್ನು ಉಂಟು ಮಾಡಿವೆ.

ಹೇಳದೇ ಹೋದರೂ ಸಹ ಸಾಮಾನ್ಯವಾಗಿ ವಿರಾಮದ ವೇಳೆಯಲ್ಲಿ ಅವರುಗಳ ಕಾಫಿ ಮತ್ತು ಟೀ ಕುಡಿಯುವ ಕೆಲಸದ ಜಾಗದಲ್ಲಿನ ಅಭ್ಯಾಸದಿಂದ ಅವರ ಸ್ಥಿತಿ ಇನ್ನೂ ಹದಗೆಟ್ಟಿದೆ. ಕೆಲಸವನ್ನು ಸಮರ್ಪಕವಾಗಿ ಮಾಡಲು ಅದರಿಂದ ಸಹಾಯವಾಗುತ್ತದೆ ಎನಿಸುವುದರಿಂದ ತಾವುಗಳು ಪ್ರತಿದಿನ ಕನಿಷ್ಟ  4-5 ಕಪ್ ಕಾಫಿ ಕುಡಿಯುತ್ತೇವೆ ಎಂದು ಐಟಿ ವಲಯದ ಬಹಳಷ್ಟು ಜನರು ಒಪ್ಪಿಕೊಂಡಿದ್ದಾರೆ.

ನೀವು ಕೂಡಾ ಒಂದೇ ಜಾಗದಲ್ಲಿ ಕುಳಿತು/ನಿಂತು ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ಮೇಜಿನ ಮುಂದೆಯೇ ಇದ್ದು ಮಾಡುವ ಉದ್ಯೋಗದಲ್ಲಿ ಇದ್ದರೆ ,ನಿಮ್ಮ ಆರೋಗ್ಯವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಒಂದೇ ಸಮನೆ ದೀರ್ಘ ಕಾಲದವರೆಗೆ ಕುಳಿತೇ ಮಾಡುವ ಅವಶ್ಯಕತೆ ಇರುವ ಉದ್ಯೋಗದಿಂದ ನಿಮಗೆ ಸ್ಠೂಲಕಾಯ, ಹೃದ್ರೋಗ ಮತ್ತು ಖಚಿತವಾಗಿ ವೆರಿಕೋಸ್ ವೇನ್ ಗಳಂತಹ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚುತ್ತದೆ.

ಈ ಹಾನಿಗೊಳಗಾದ ರಕ್ತನಾಳಗಳ ಕವಾಟಗಳಿಗೆ ರಕ್ತ ಹಿಂದಕ್ಕೆ ಹರಿಯುವುದನ್ನು ತಡೆಗಟ್ಟಲು ಕಷ್ಟವಾದಾಗ ವೆರಿಕೋಸ್ ವೇನ್  ಗಳು ಕಾಣಿಸಿಕೊಳ್ಳುತ್ತವೆ. ರಕ್ತ ಮತ್ತೆ ಹೃದಯಕ್ಕೆ ಹಿಂತಿರುಗಿ ಹೋಗುವುದಿಲ್ಲ ಹಾಗಾಗಿ ಕಾಲು ಮತ್ತು ಪಾದಗಳಲ್ಲಿ ರಕ್ತ ಮಡುಗಟ್ಟುತ್ತದೆ. ಇದರಿಂದ ತೊಂದರೆಯಾದ ಜಾಗದಲ್ಲಿ ತೀವ್ರವಾದ ನೋವು, ಬಾಧೆ, ಮತ್ತು ತುರಿಕೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಅಂತಿಮ ಹಂತ ತಲುಪಿದ ಸಂದರ್ಭಗಳಲ್ಲಿ, ರೋಗಿಗಳಿಗೆ ನಿಲ್ಲುವುದಕ್ಕೆ ಅಥವಾ ಚಲಿಸುವುದಕ್ಕೂ ಕಷ್ಟವಾಗಬಹುದು. ವೆರಿಕೋಸ್ ವೇನ್ ಗಳಿಂದ ರೋಗಿಯ ಜೀವನದ ರೀತಿಯೇ ಹದಗೆಡುತ್ತದೆ ಮತ್ತು ಚಿಕಿತ್ಸೆಯಲ್ಲಿ ಸ್ವಲ್ಪ ವಿಳಂಬವಾದರೂ ಈ ವೈದ್ಯಕೀಯ ಸ್ಥಿತಿಗಳು ಕ್ರಾನಿಕ್ ವೀನಸ್ ಇನ್ ಸಫಿಶಿಯನ್ಸಿ, ವೀನಸ್ ಅಲ್ಸರ್ ಗಳು (ಚರ್ಮದ ಮೇಲೆ ತೆರೆದ ಹುಣ್ಣುಗಳು),  ಮತ್ತು ಡೀಪ್ ವೇನ್ ಥ್ರಾಂಬೋಸಿಸ್ (ಡಿವಿಟಿ/DVT – ಆಳದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು) ಮುಂತಾದ ಆರೋಗ್ಯ ಸಮಸ್ಯೆಗಳಾಗಿ ಬದಲಾಗಬಹುದು.

DVT/ಡಿವಿಟಿ ಮುಂದುವರೆದು ಪಲ್ಮೊನರಿ ಎಂಬಾಲಿಸಂ ಎನ್ನುವಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಕಾಲಿನಿಂದ ಒಂದು ಹೆಪ್ಪುಗಟ್ಟಿದ ರಕ್ತದ ಮುದ್ದೆ ಬಿಡುಗಡೆ ಹೊಂದಿ ಶ್ವಾಸಕೋಶ ತಲುಪಿದಾಗ ಈ ಆರೊಗ್ಯ ಸಮಸ್ಯೆ ಉಂಟಾಗುತ್ತದೆ. ಇದರಿಂದ ಆಮ್ಲಜನಕದ ಪೂರೈಕೆಗೆ ತೊಂದರೆಯಾಗುತ್ತದೆ ಮತ್ತು ಅಂತಿಮವಾಗಿ ಸಾವಿನಲ್ಲಿ ಕೊನೆಯಾಗುತ್ತದೆ.

ವೀನಸ್ ವೇನ್ ಗಳ ಚಿಕಿತ್ಸೆಗೆ, ಶೇಕಡಾವಾರು ಹೆಚ್ಚಿನ ಯಶಸ್ಸನ್ನು ಕಂಡಿರುವ ಹೊಸ ಸುಧಾರಿತ, ಕನಿಷ್ಠ ಆಕ್ರಮಣಕಾರಿ ಚಿಕಿತ್ಸೆಗಳು ಈಗ ಲಭ್ಯವಿರುವುದರಿಂದ ಇನ್ನು ಮುಂದೆ ನೀವು ತೆರೆದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿಲ್ಲ. ಲೇಸರ್ ಅಬ್ಲೇಶನ್ ಕಾರ್ಯ ವಿಧಾನವು  ಲೋಕಲ್ ಅನೆಸ್ತೀಸಿಯ ನೀಡಿ ಮಾಡುವಂತಹ ನೋವುರಹಿತ ವಿಧಾನವಾಗಿದೆ. ಈ ವಿಧಾನದಲ್ಲಿ ಹಾನಿಗೊಳಗಾದ ವೆರಿಕೋಸ್ ವೇನ್ ಗಳನ್ನು ಸುಡಲು ಮತ್ತು ಮುಚ್ಚಲು ಲೇಸರ್ ಫೈಬರ್ ಅನ್ನು ಬಳಸಲಾಗುತ್ತದೆ.

ಡಾ.ರಾಜಃ ವಿ ಕೊಪ್ಪಲ ಅವರು ಒಬ್ಬ ಉತ್ತಮ ಲ್ಯಾಪ್ರೋಸ್ಕೋಪಿಕ್ ಹಾಗೂ ಹೆಚ್ಚು ನುರಿತ ವ್ಯಾಸ್ಕ್ಯುಲಾರ್ ಸರ್ಜನ್ ಆಗಿದ್ದಾರೆ. ವೆರಿಕೋಸ್ ವೇನ್ ಗಳ ಚಿಕಿತ್ಸೆಗೆ ಹೈದರಾಬಾದಿನಲ್ಲಿ ಅತ್ಯುತ್ತಮ ಸರ್ಜನ್ ಆಗಿರುವ ಅವರು ಹೈದರಾಬಾದಿನ ಅವಿಸ್ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ವೆರಿಕೋಸ್ ವೇನ್ ಗಳ ಚಿಕಿತ್ಸೆಗಳಲ್ಲಿ ನೂರಕ್ಕೆ ನೂರರಷ್ಟು ಯಶಸ್ಸನ್ನು ಕಂಡಿರುವ ಅವರು 12000 ಕ್ಕಿಂತಲೂ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.

ರೋಗಿಗಳ ಚಿಕಿತ್ಸೆಯನ್ನು ನಿರಾಳ ಮಾಡಲು ಮತ್ತು ಅವರು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಲು ಅವರ ಬೆಂಬಲಕ್ಕಾಗಿ ಅವಿಸ್  ಆಸ್ಪತ್ರೆಗಳಲ್ಲಿ ವಿಶ್ವ ದರ್ಜೆಯ ವೈದ್ಯಕೀಯ ಉಪಕರಣಗಳು ಮತ್ತು ಆಧುನಿಕ ಮೂಲ ಸೌಕರ್ಯಗಳ ಸೌಲಭ್ಯವಿದೆ. ದಿನವಿಡೀ 24 ಗಂಟೆಗಳ ಕಾಲವೂ ತ್ವರಿತ ಮತ್ತು ಸ್ನೇಹಪರ ವೈದ್ಯಕೀಯ ನೆರವು ನೀಡುವುದರಿಂದ,ಅವಿಸ್ ಆಸ್ಪತ್ರೆಗಳು ರೋಗಿಗಳ ತೃಪ್ತಿಕರ ಅನುಭವದ ಅನುಪಾತದಲ್ಲಿ ಮೊದಲನೆಯ ಶ್ರೇಣಿಯಲ್ಲಿದೆ ಮತ್ತು ಚಿಕಿತ್ಸೆಯ ಮೊದಲು, ಚಿಕಿತ್ಸೆಯ ಸಮಯ ಮತ್ತು ನಂತರದಲ್ಲಿ ರೋಗಿಯ ಅನುಭವ ಒಂದೇ ರೀತಿಯಲ್ಲಿ ತೃಪ್ತಿಕರವಾಗಿ ಇರುತ್ತದೆ.

ವೆರಿಕೋಸ್ ವೇನ್ ಗಳ  ಅತ್ಯುತ್ತಮ ಮಟ್ಟದ ಚಿಕಿತ್ಸೆಗೆ ಮತ್ತೆಲ್ಲೂ ನೋಡಬೇಡಿ, ಹೈದರಾಬಾದಿನ ಅವಿಸ್ ಆಸ್ಪತ್ರೆಗಳಿಗೆ ಭೇಟಿ ಕೊಡಿ ಅಷ್ಟೇ. ಡಾ. ರಾಜಃ ವಿ ಕೊಪ್ಪಲ ಮತ್ತು ಅವರ ಅರ್ಹ ವೈದ್ಯರ ತಂಡವು ನಿಮಗೆ ಆ ಕಾರ್ಯವಿಧಾನದ ಸಂಪೂರ್ಣ ವಿವರವನ್ನು ತಿಳಿಸಿ ಅದರೊಂದಿಗೆ ಚಿಕಿತ್ಸೆಯ ನಂತರದ ಆರೈಕೆಯ ವಿಧಾನಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತಾರೆ. ಇಂದೇ ನಿಮ್ಮ ಭೇಟಿಯನ್ನು ಗೊತ್ತು ಮಾಡಿಕೊಳ್ಳಿ!