ವೆರಿಕೋಸ್ ವೇನ್ (ಉಬ್ಬಿರುವ ರಕ್ತನಾಳಗಳು) ಜೀವ ಕಂಠಕವಲ್ಲ. ಆದರೆ, ಸರಿಯಾದ ಚಿಕಿತ್ಸೆ ನೀಡದೇ ಹೋದರೆ, ಅದು
ಆರೋಗ್ಯದ ಮೇಲೆ ಭೀಕರ ಪರಿಣಾಮಗಳನ್ನು ಬೀರಬಹುದು. ಚಿಕಿತ್ಸೆಗೂ ಮುನ್ನ ಸರಿಯಾದ ಡಯಾಗ್ನಿಸಿಸ್ ಮಾಡಿ ಅದರ
ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವುದು ಅತ್ಯಗತ್ಯ. ಜೊತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ರೋಗಿಯು ಬೇಗ
ಗುಣಮುಖವಾಗುವಂತೆ ಮಾಡಬಹುದು ಎಂದೇ ನಾವು ನಂಬಿದ್ದೇವೆ.

ಎವಿಸ್ ಆಸ್ಪತ್ರೆಯಲ್ಲಿ, ನಾವು ರೋಗಿಯ ಆರೋಗ್ಯದ ಹಿನ್ನೆಲೆಯನ್ನು ವಿವರವಾಗಿ ಪರಿಶೀಲಿಸಿದ ನಂತರವಷ್ಟೇ ಅವರಿಗೆ
ಸೂಕ್ತವಾದ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುತ್ತೇವೆ. ಜೊತೆಗೆ, ಅವರ ಎಲ್ಲಾ ತೆರನಾದ ಪ್ರಶ್ನೆ ಹಾಗೂ ಅನುಮಾನಗಳಿಗೆ ಸದಾ
ಉತ್ತರಿಸುವ ಮೂಲಕ ಸ್ಪಂದಿಸುವ ವಿಷಯಕ್ಕೆ ಸಾಕಷ್ಟು ಒತ್ತು ನೀಡುತ್ತೇವೆ. ಅದರಿಂದ ಅವರಿಗೆ ಎವಿಸ್ ಆಸ್ಪತ್ರೆಯಲ್ಲಿ ನುರಿತ
ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತದೆ ಎಂಬ ಭರವಸೆ ಹಾಗೂ ತೃಪ್ತಿ ಸಿಗುವಂತೆ ಮಾಡಲಾಗುತ್ತದೆ.

ಮೇಲೆ ಹೇಳಲಾದ ವಿಷಯಗಳನ್ನು ಪರಿಗಣಿಸಿದರೆ, ರಕ್ತನಾಳ ಪರೀಕ್ಷಾ ಕೇಂದ್ರಗಳ ಪೈಕಿ ‘ಎವಿಸ್ ಆಸ್ಪತ್ರಗಳು’ ನಿಜಕ್ಕೂ
ರಕ್ತನಾಳ ಪರೀಕ್ಷೆಗೆ ಸೂಕ್ತವಾದ ಹಾಗೂ ಸರಿಯಾದ ಆಯ್ಕೆ ಎಂಬುದನ್ನು ಸಮರ್ಥಿಸುತ್ತದೆ.

  1. ನಮ್ಮ ವೈದ್ಯರು ತಮ್ಮದೇ ಆದ ಕಲರ್ ಡಾಪ್ಲರ್ ಪರೀಕ್ಷೆಯನ್ನು ನಡೆಸುತ್ತಾರೆ

ಡಾಪ್ಲರ್ ಅಲ್ಟ್ರಾಸೌಂಡ್’ಯು ಧ್ವನಿ ತರಂಗಗಳ ಮೂಲಕ ರಕ್ತ ಚಲನೆಗೆ ಸಂಬಂಧಿಸಿದ ಸಮಸ್ಯೆಗಳಾದ ರಕ್ತ ಹೆಪ್ಪುಗಟ್ಟುವಿಕೆ
ಹಾಗೂ ಬ್ಲಾಕೇಜ್’ಗಳನ್ನು ಪರೀಕ್ಷಿಸುತ್ತದೆ. ಈ ಪರೀಕ್ಷೆಯು ಡೀಪ್ ವೇನ್ ಥ್ರೋಬೋಸಿಸ್ (DVT) ಅನ್ನು ಪತ್ತೆಹಚ್ಚುವಲ್ಲಿ
ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಹಾಗೂ ಅದರ ಪರೀಕ್ಷೆಗೆ ಒಳಗಾಗಲು ನಮ್ಮ ವೈದ್ಯರೂ ಕೂಡ ಯಾವುದೇ ರೀತಿಯಲ್ಲಿ
ಹಿಂಜರಿಯುವುದಿಲ್ಲ.

2. ಅವರು “ಕಲೆ ರಹಿತ”, “ಹೊಲಿಗೆ ರಹಿತ”, “ಅರವಳಿಕೆ ರಹಿತ” ಲೇಸರ್ ಅಬ್ಲೇಷನ್ ಚಿಕಿತ್ಸಾ ಕ್ರಮವನ್ನು ವೆರಿಕೋಸ್
ವೇನ್ಸ್ ಚಿಕಿತ್ಸೆಗೆ ಬಳಸುತ್ತಾರೆ.

ನಮ್ಮ ತಂಡದ ನುರಿತ ವೈದ್ಯರಾದ ಡಾ.ರಾಜ ವಿ. ಕೊಪ್ಪಾಲ ಅವರು ನೋವುರಹಿತ ಲೇಸರ್ ಚಿಕಿತ್ಸೆಯನ್ನು
ಸಂಪೂರ್ಣವಾಗಿ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ನಡೆಸವುದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ರೋಗಿಯ
ಚರ್ಮದ ಮೇಲೆ ಯಾವುದೇ ಕೊಯ್ದ ಗಾಯಗಳನ್ನು ನಿಶ್ಚಯವಾಗಿ ಮಾಡುವುದಿಲ್ಲ. ಆದ್ದರಿಂದ ಅದಕ್ಕೆ ಯಾವುದೇ
ಹೊಲಿಗೆ ಹಾಕುವ ಪ್ರಮೇಯವೇ ಬರುವುದಿಲ್ಲ. ಈ ವಿಧಾನದಿಂದ ರೋಗಿಯ ಮೇಲೆ ಯಾವುದೇ ಅಡ್ಡ ಪರಿಣಾಮಗಳು
ಬೀರುವುದಿಲ್ಲ ಹಾಗೂ ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.

3. ಅವರು ರಕ್ತನಾಳ, ನಾಳದ ಹುಣ್ಣುಗಳು ಹಾಗೂ ಗಾಯಗಳ ಸಂಪೂರ್ಣ ಗುಣಪಡಿಸುವ ಹೊಣೆಯನ್ನು ಹೊರುತ್ತಾರೆ.

ಎವಿಸ್ ಆಸ್ಪತ್ರೆಯು ತಮ್ಮ ನುರಿತ ವೈದ್ಯರುಗಳ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದು ರಕ್ತನಾಳದ ಹಾಗೂ ನರಗಳ ದೀರ್ಘಾವದಿ ಸಮಸ್ಯೆಗಳು, ರಕ್ತನಾಳದ ಸಮಸ್ಯೆಯಿಂದ ಉಂಟಾಗುವ ಕಾಲು ಮತ್ತು ಪಾದದ ಹುಣ್ಣುಗಳನ್ನು ಸಂಪೂರ್ಣವಾಗಿ ಗುಣಪಡಿಸು ಸಂಪೂರ್ಣ ಹೊಣೆಯನ್ನು ಹೊರುತ್ತಾರೆ.

ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಹೊಂದಿರುವ ಎವಿಸ್ ಆಸ್ಪತ್ರೆಯು ಇಡೀ ಭಾರತದಲ್ಲೇ ರಕ್ತನಾಳ ಚಿಕಿತ್ಸಾ ಕೇಂದ್ರಗಳ ಪೈಕಿ ಮುಂಚೂಣಿಯಲ್ಲಿದೆ. ಹಲವಾರು ಸಂತೃಪ್ತ ಕ್ಲೈಂಟ್ ಗಳು ಇಲ್ಲಿನ ವೈದ್ಯಕೀಯ ಸೇವೆಯ ಕುರಿತು ಹಾಡಿ ಹೊಗಳಿದ್ದಾರೆ.

4. ಅವರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಮಾಣೀಕೃತ ಪರಿಣತಿ ಇದೆ.

ಡಾ. ರಾಜ ವಿ. ಕೊಪ್ಪಾಲ ಅವರು ಎವಿಸ್ ಆಸ್ಪತ್ರೆಯ ರಕ್ತನಾಳ ವಿಭಾಗವನ್ನು ಮುನ್ನಡೆಸುತ್ತಿದ್ದು ರಕ್ತನಾಳ ಹಾಗೂ ಇಂಟರ್ ವೆನ್ಷನಲ್ ರೇಡಿಯೋಲಜಿ ಕ್ಷೇತ್ರದಲ್ಲಿ 24 ವರ್ಷಗಳ ಸುರ್ದೀಘ ಅನುಭವ ಹಾಗೂ ಪರಿಣತಿ ಹೊಂದಿದ್ದಾರೆ. ಅವರು ಅಮೆರಿಕನ್ ಕಾಲೇಜ್ ಆಫ್ ಫ್ಲೇಬೊಲಜಿ (ACP) ಹಾಗೂ ಅಟ್ಲಾಂಟಾದ ಎಮೋರಿ ಯುನಿವರ್ಸಿಟಿ ಆಸ್ಪತ್ರೆಯಿಂದ ಮಾಣೀಕೃತಗೊಂಡಿದ್ದಾರೆ. ಮೇಲಾಗಿ, ಇವೆಲ್ಲಾ ಸಾಧನೆಗಳು ನಂತರ ಅವರು ಭಾರತಕ್ಕೆ ಹಿಂದುರಿಗಿ ತಮ್ಮ ದೇಶದ ಜನರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಬೇಕು ನಿರ್ಧರಿಸಿದರು.

5.ಅವರು ವರ್ಷಕ್ಕೆ 4000ಕ್ಕೂ ಹೆಚ್ಚು ಸಂಖ್ಯೆಯ ರಕ್ತನಾಳ ಸಂಬಂಧಿ ಕಾಯಿಲೆ ಪ್ರಕರಣಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಎವಿಸ್ ಆಸ್ಪತ್ರೆಯು ವಾರ್ಷಿಕವಾಗಿ 4000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಅತಿ ಹೆಚ್ಚು ಯಶಸ್ಸು ದರವನ್ನು ಹೊಂದುವುದರ ಮೂಲಕ ಹಾಗೂ ಏರುಗತಿಯಲ್ಲಿರುವ ಗುಣಮುಖರಾದ ಸಂತೃಪ್ತ ರೋಗಿಗಳ ಕಾರಣದಿಂದಾಗಿ ಎವಿಸ್ ಆಸ್ಪತ್ರೆಯನ್ನು ರಕ್ತನಾಳ ಚಿಕಿತ್ಸಾ ಕೇಂದ್ರಗಳ ಪಟ್ಟಿಯಲ್ಲಿ ಭಾರತದಲ್ಲೇ ಅತ್ಯಂತ ಆಧ್ಯತೆಯ ಆಸ್ಪತ್ರೆ ಎಂದು ಘೋಷಿಸಲಾಗಿದೆ.

ಎವಿಸ್ ಆಸ್ಪತ್ರೆಯು ಹೈದರಾಬಾದಿನಲ್ಲಿರುವ 50 ಹಾಸಿಗೆಗಳ ಅಂತಾರಾಷ್ಟ್ರೀಯ ರೇಡಿಯಾಲಜಿ ಆಸ್ಪತ್ರೆಯಾಗಿದೆ. ಅಲ್ಲಿ ಅತ್ಯುನ್ನತ ಮಟ್ಟದ ವೈದ್ಯಕೀಯ ಸೌಲಭ್ಯಗಳಿವೆ ಹಾಗೂ ಶ್ರೇಷ್ಠಮಟ್ಟದ ಪರಿಣಿತ ವೈದ್ಯರುಗಳ ತಂಡವೇ ಇದೆ. ಎವಿಸ್ ಆಸ್ಪತ್ರೆಯು ಡೇ ಕೇರ್ ಹಾಗೂ ಅಲ್ಪಕಾಲಾವಧಿಯ ಶಸ್ತ್ರಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ರೋಗಿಗಳಿಗೂ ಅನ್ವಯವಾಗುವಂತೆ ಹಲವು ಪ್ರಮುಖ ವಿಮೆ ಸೇವಾದಾರರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಹೊಂದಿದ ವೈದ್ಯರುಗಳೊಂದಿಗೆ, ನಾವು, ನಿಮ್ಮ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟದ ಹಾಗೂ ವಿಶೇಷ ಮುತುವರ್ಜಿಯ ಬಗೆಗಿನ ನಿರೀಕ್ಷೆಗಳ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಎತ್ತರದಲ್ಲಿ ನಿಲ್ಲುತ್ತೇವೆ ಎಂದು ಖಂಡಿತವಾಗಿ ಹೇಳಬಯಸುತ್ತೇವೆ. ಇಂದೇ ನಿಮ್ಮ ಅಪಾಯಿಂಟ್’ಮೆಂಟನ್ನು ಮುಂಗಡಿಸಿ.