ವೆರಿಕೋಸ್ ವೇನಿನ ಚಿಕಿತ್ಸೆಗಳು: ಆಗ ಮತ್ತು ಈಗ


ವೆರಿಕೋಸ್ ವೇನ್ಗಳು/ಉಬ್ಬಿರುವ ರಕ್ತನಾಳಗಳು ಒಂದು ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಯಾರಿಗಾದರೂ ಯಾವುದೇ ವಯಸ್ಸಿನಲ್ಲಿಯಾದರೂ ಕಾಣಿಸಿಕೊಳ್ಳಬಹುದು . ಪುರುಷ  ಸದಸ್ಯರಿಗೆ ಹೋಲಿಸಿದರೆ ಮಹಿಳೆಯರು, ತಮ್ಮ ಹಾರ್ಮೋನುಗಳ ಕಾರಣದಿಂದಾಗಿ, ಉಬ್ಬಿರುವ ರಕ್ತನಾಳಗಳ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ. ಭಾರತದಲ್ಲಿ ಶೇಕಡ %40 ಮಹಿಳೆಯರು ಮತ್ತು ಸರಿಸುಮಾರು ಶೇಕಡ %25 ಪುರುಷರು ತಮ್ಮ ಕಾಲು ಮತ್ತು ಪಾದಗಳಲ್ಲಿನ ಉಬ್ಬಿರುವ ರಕ್ತನಾಳಗಳ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

ಹೆಚ್ಚಿನ ಜನರಿಗೆ ಉಬ್ಬಿರುವ ರಕ್ತನಾಳಗಳ ಸೂಚನೆಗಳು ಕಂಡು ಬಂದ ಆರಂಭದಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗುತ್ತದೆ. ಪೌಷ್ಠಿಕ ಆಹಾರವನ್ನು ಸೇವಿಸುವುದು, ಪ್ರತಿದಿನ ಕೆಲವು ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕೆಫೀನ್ ಮತ್ತು ಮಧ್ಯ ಸೇವನೆಯನ್ನು ಸೀಮಿತಗೊಳಿಸುವಂತೆ ವೈದ್ಯರು ಬಲವಾಗಿ ಶಿಫಾರಸು ಮಾಡುತ್ತಾರೆ.

ಇದೆಲ್ಲವನ್ನು ಮಾಡುವುದರ ಹೊರತಾಗಿ, ಆರೋಗ್ಯ ತಜ್ಞರು ಉಬ್ಬಿರುವ ರಕ್ತನಾಳಗಳಿಂದ ಬಳಲುತ್ತಿರುವ ಜನರಿಗೆ ಸಮತಟ್ಟಾದ ಜಾಗದಲ್ಲಿ ಅಂಗಾತ ಮಲಗಿರುವಾಗ ತಮ್ಮ ಕಾಲುಗಳನ್ನು ಹೃದಯಕ್ಕಿಂತ ಒಂದು ಮಟ್ಟ ಮೇಲಿರುವ ಜಾಗದಲ್ಲಿ ಇರಿಸಿ ವಿಶ್ರಮಿಸುವಂತೆ ಹೇಳುತ್ತಾರೆ. ಇದರಿಂದ ಕಾಲು ಮತ್ತು ಪಾದಗಳಿಂದ  ರಕ್ತ ಹೃದಯಕ್ಕೆ ಹಿಂತಿರುಗಿ ಹರಿಯಲು  ಸಹಾಯವಾಗುತ್ತದೆ,  ಮತ್ತು ಇದರಿಂದ ಊತ ನಿವಾರಣೆಯಾಗಿ,ನೋವು ಕಡಿಮೆಯಾಗುತ್ತದೆ.

ಉಬ್ಬಿರುವ ರಕ್ತನಾಳಗಳ ಸಮಸ್ಯೆ ಇರುವ  ರೋಗಿಗಳಿಗೆ ಬ್ಲಡ್ ಥಿನ್ನರ್  ಸೇವಿಸುವ ಮೂಲಕ ಮತ್ತು ಕಮ್ಪ್ರೆಶನ್ ಸ್ಟಾಕಿಂಗ್ಸ್ ಧರಿಸುವ ಮೂಲಕ ತಾತ್ಕಾಲಿಕ ಪರಿಹಾರ ದೊರಕುತ್ತದೆ, ಆದರೆ ಸತತವಾಗಿ ಹೆಚ್ಚುತ್ತಾ ಹೋಗುವ ನೋವು ಮತ್ತು ಈ ಅಸ್ವಸ್ಥತೆಗೆ ಶಾಶ್ವತ ಪರಿಹಾರವೆಂದರೆ ನೋಡಲು ಅಸಹ್ಯವಾಗಿ ಕಾಣುವ ಈ ಉಬ್ಬಿರುವ ರಕ್ತನಾಳಗಳನ್ನು ಶಾಶ್ವತವಾಗಿ ಮುಚ್ಚುವುದು ಮತ್ತು / ಅಥವಾ ತೆಗೆದುಹಾಕುವುದು. ಉಬ್ಬಿರುವ ರಕ್ತನಾಳಗಳನ್ನು ಮುಚ್ಚುವುದು / ತೆಗೆದುಹಾಕುವುದರಿಂದ ದೇಹವು ಡಿಆಕ್ಸಿಜನೇಟೆಡ್  ರಕ್ತವನ್ನು ನೆರೆಯ ಆರೋಗ್ಯಕರ ರಕ್ತನಾಳಗಳ ಮೂಲಕ  ಬೇರೆಮಾರ್ಗವಾಗಿ ಸಾಗಿಸುವುದರಿಂದ ರಕ್ತ ಸಂಗ್ರಹವಾಗುವುದು ನಿಲ್ಲುತ್ತದೆ.

ಉಬ್ಬಿರುವ ರಕ್ತನಾಳಗಳ ರೋಗಲಕ್ಷಣಗಳನ್ನು ಉಪೇಕ್ಷೆ ಮಾಡಿ ಮತ್ತು ಅದರ ಚಿಕಿತ್ಸೆಯನ್ನು ವಿಳಂಬಗೊಳಿಸುವ ರೋಗಿಗಳಿಗೆ  ಇತರೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚಾಗುತ್ತದೆ – ಅವುಗಳೆಂದರೆ – ವೀನಸ್ ಸ್ಟಾಸಿಸ್, ಚರ್ಮದ ಬಣ್ಣ ಬದಲಾವಣೆ, ವೀನಸ್ ಎಕ್ಸಿಮಾ, ಮತ್ತು ಆಳವಾದ ರಕ್ತನಾಳಗಳಲ್ಲಿ (ಡಿವಿಟಿ) ರಕ್ತ ಹೆಪ್ಪುಗಟ್ಟುವಿಕೆ, ಇದು ಪಲ್ಮನರಿ ಎಂಬಾಲಿಸಮ್ (ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ದೇಹದ ಪ್ರಮುಖ ಭಾಗಗಳಿಗೆ ಆಮ್ಲಜನಕದ ಪೂರೈಕೆಯನ್ನು ತಡೆಯುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ( ಎನ್ನುವಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಆದ್ದರಿಂದ  ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಸ್ಥಿತಿಯು ಇನ್ನಷ್ಟು ಹದಗೆಡದಂತೆ ತಡೆಯಲು ಉಬ್ಬಿರುವ ರಕ್ತನಾಳಗಳ ಚಿಕಿತ್ಸೆಗೆ ಒಳಗಾಗುವ ಅಗತ್ಯ ಖಂಡಿತವಾಗಿಯೂ ಇದೆ. ಉಬ್ಬಿರುವ ರಕ್ತನಾಳಗಳಿಗೆ ಬಹುಸಂಖ್ಯೆಯಲ್ಲಿ ಲಭ್ಯವಿರುವ ಚಿಕಿತ್ಸಾ ವಿಧಾನಗಳಲ್ಲಿ ನೀವು ಆಯ್ಕೆ ಮಾಡಬಹುದು. ಶಸ್ತ್ರಚಿಕಿತ್ಸೆಯ ಚಿಕಿತ್ಸೆಯು ಸಿರೆಯ ಕೊರತೆಯ ಮೂಲ ಕಾರಣವನ್ನು ಸರಿಪಡಿಸುವುದಲ್ಲದೆ ನಿಮ್ಮ ಸೌಂದರ್ಯವರ್ಧಕ ಕಾಳಜಿಗಳನ್ನು ಸಹ ನೋಡಿಕೊಳ್ಳುತ್ತದೆ.

 ಉಬ್ಬಿರುವ ರಕ್ತನಾಳಗಳ ಚಿಕಿತ್ಸೆಯ ವಿಧಾನಗಳು

ಹಳೆಯ ದಿನಗಳಲ್ಲಿ, ರಕ್ತನಾಳಗಳನ್ನು ತೆಗೆಯುವುದು ರೋಗಿಗಳ ಅತ್ಯಂತ ಜನಪ್ರಿಯ ಚಿಕಿತ್ಸಾ ಆಯ್ಕೆಯಾಗಿದ್ದು, ಅಲ್ಲಿ ಸಾಮಾನ್ಯ ಅರಿವಳಿಕೆ ನೀಡಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿತ್ತು. ಈ ವಿಧಾನದಲ್ಲಿ, ತೊಂದರೆಗೊಳಗಾದ ಜಾಗದಲ್ಲಿ ಹಲವಾರು ಕಡೆ ಸಣ್ಣದಾಗಿ ಛೇದಿಸುವುದರ ಮೂಲಕ ಹಾನಿಗೊಳಗಾದ ರಕ್ತ ನಾಳಗಳನ್ನು(ತೆಗೆದುಹಾಕಲಾಗುತ್ತಿತ್ತು) ಹೊರತೆಗೆಯಲಾಗುತ್ತಿತ್ತು. ಈ ಕಾರ್ಯವಿಧಾನದ ನಂತರ, ರೋಗಿಗಳು ಚೇತರಿಸಿಕೊಳ್ಳಲು ಮತ್ತು ಕೆಲಸಕ್ಕೆ ಮರಳಲು       ಸುಮಾರು 2 ರಿಂದ 4 ವಾರಗಳ ಸಮಯ ಬೇಕಾಗುತ್ತಿತ್ತು.

ವೀನಸ್ ಲಿಟಿಗೇಶನ್/ಅಭಿಧಮನಿ ದಾವೆ ಎಂದು ಕರೆಯಲ್ಪಡುವ ಮತ್ತೊಂದು ವಿಧಾನದಲ್ಲಿ, ನಾಳೀಯ ಶಸ್ತ್ರಚಿಕಿತ್ಸಕನು /ವ್ಯಾಸ್ಕುಲಾರ್ ಸರ್ಜನ್  ಹಾನಿಗೊಳಗಾದ ರಕ್ತನಾಳಗಳನ್ನು ಕತ್ತರಿಸಿ ಅವನ್ನು ಕಟ್ಟುತ್ತಾನೆ. ಈ ವಿಧಾನವು ಹೆಚ್ಚು ಇನ್ವೇಸೀವ್ ಆಗಿರುತ್ತದೆ ಮತ್ತು ಸೋಂಕು ಅಥವಾ ರಕ್ತಸ್ರಾವ ಹೆಚ್ಚಾಗುವ ಸಾಧ್ಯತೆಗಳಿವೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಹೆಚ್ಚು ಕಾಲ ಇರುವ ಅಗತ್ಯವಿರುತ್ತದೆ ಮತ್ತು ಹೊಲಿಗೆಗಳಿಂದಾಗುವ ನೋವು ಮತ್ತು ಎದ್ದು ಕಾಣುವ ಚರ್ಮದ ಮೇಲಿನ ಕಲೆಗಳ ಬಗ್ಗೆ ಅಸಮಾಧಾನ ಇರುತ್ತದೆ

ಈ ಎರಡೂ ಕಾರ್ಯವಿಧಾನಗಳಲ್ಲಿ, ರೋಗಿಗಳಿಗೆ ಸಾಮಾನ್ಯವಾಗಿ ಬೆಡ್ ರೆಸ್ಟ್ ಅನ್ನು ಸೂಚಿಸಲಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಹಂತದಲ್ಲಿ ಕೆಲವು ವಾರಗಳವರೆಗೆ ದೈಹಿಕ ಚಟುವಟಿಕೆಯನ್ನು ನಿಷೇದಿಸಲಾಗುತ್ತದೆ.. ಬಾಯಿಯಿಂದ ಔ ಷಧಿಗಳನ್ನು ಸೇವಿಸುದರ ಜೊತೆಗೆ ರೋಗಿಗಳು ಕಂಪ್ರೆಷ್ಶನ್ ಸ್ಟಾಕಿಂಗ್ಸ್ ಧರಿಸಬೇಕಾಗಬಹುದು. ಇವುಗಳು ಪರಿಣಾಮಕಾರಿಯಾಗಿದ್ದರೂ, ಇವು ಸಾಕಷ್ಟು ನೋವಿನಿಂದ ಕೂಡಿದ್ದು, ಚೇತರಿಕೆಗೆ  ಹೆಚ್ಚು ಸಮಯ ಬೇಕಾಗುತ್ತದೆ.

ಹಳೆಯ ರೀತಿಗೆ ವಿಭಿನ್ನವಾಗಿರುವ, ಉಬ್ಬಿರುವ ರಕ್ತನಾಳಗಳ ಚಿಕಿತ್ಸೆಗಾಗಿ ಹೊಸ ಮತ್ತು ಸುಧಾರಿತ ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನಗಳು ಈಗ ಲಭ್ಯವಿದೆ.USFDA/ ಯುಎಸ್ಎಫ್ಡಿಎ ಅನುಮೋದಿತ ಎಂಡೋವೆನಸ್ ಲೇಸರ್ ಅಬ್ಲೇಶನ್ ವಿಧಾನವು ಉಬ್ಬಿರುವ ರಕ್ತನಾಳಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಇದು ಸ್ಥಳೀಯ ಅರಿವಳಿಕೆ ಪ್ರಭಾವದಿಂದ ಹೊರರೋಗಿಗಳ ರೀತಿಯಲ್ಲಿ ನಡೆಸುವ ನೋವುರಹಿತ ಪ್ರಕ್ರಿಯೆಯಾಗಿದೆ.

ಎಲ್ಲಾ ಉಬ್ಬಿರುವ ರಕ್ತನಾಳಗಳನ್ನು ಲೈವ್ ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಮ್ಯಾಪ್ ಮಾಡಲಾಗುತ್ತದೆ ಮತ್ತು ಒಂದೇ ಸಿಟ್ಟಿಂಗ್ ನಲ್ಲಿ ತೆಗೆದುಹಾಕಲಾಗುತ್ತದೆ. ರೋಗಿಯು ಅದೇ ದಿನ ಮನೆಗೆ ಹಿಂತಿರುಗಿ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಬಹುದು.ಇದರಿಂದ ಯಾವುದೇ ಪ್ರಮುಖ ಅಡ್ಡಪರಿಣಾಮಗಳಿಲ್ಲ ಮತ್ತು ಉಬ್ಬಿರುವ ರಕ್ತನಾಳಗಳು ಮತ್ತೆ ಬರುವ ಸಾಧ್ಯತೆ ತುಂಬಾ ಕಡಿಮೆ. ಇದು ವಿಶ್ವದಾದ್ಯಂತ ಅತ್ಯಂತ ವಿಶ್ವಾಸಾರ್ಹಕವಾದ ಮತ್ತು ವ್ಯಾಪಕವಾಗಿ ನಿರ್ವಹಿಸುತ್ತಿರುವ ಚಿಕಿತ್ಸಾ ವಿಧಾನವಾಗಿದೆ.  

ಮುಕ್ತಾಯ

ನಿಮ್ಮ ಉಬ್ಬಿರುವ ರಕ್ತನಾಳಗಳಿಗೆ ಯಾವುದೇ ನೋವಿಲ್ಲದ,ಯಾವುದೇ ಹೊಲಿಗೆಯಿಲ್ಲದ ಮತ್ತು ಯಾವುದೇ ಗಾಯವಿಲ್ಲದ ಎಂಡೋವೀನಸ್ ಲೇಸರ್ ಅಬ್ಲೇಶನ್ ಚಿಕಿತ್ಸೆಯನ್ನು ಆರಿಸಿ. ಅತಿ ವೇಗದಲ್ಲಿ ಮಾಡುವಂತಹ ಮತ್ತು ಚೇತರಿಕೆಯೂ ತ್ವರಿತವಾಗಿರುವ ಈ ವಿಧಾನದ ಯಶಸ್ಸಿನ ಪ್ರಮಾಣ ಹೆಚ್ಚಿದ್ದು ಗಗನ ಮುಟ್ಟುವ ಮಟ್ಟಕ್ಕಿದೆ.. ನೋವುರಹಿತ ಮತ್ತು ಕನಿಷ್ಠ ಆಕ್ರಮಣಕಾರಿ ವಿಧಾನವೆಂದು ಪರಿಗಣಿಸಲಾಗಿರುವ, ಇದು ಎಲ್ಲಾ ವಯಸ್ಸಿನ ರೋಗಿಗಳಿಗೆ ಸೂಕ್ತವಾಗಿದೆ.

ಹೈದರಾಬಾದಿನ ಅವಿಸ್ ನಾಳೀಯ ಕೇಂದ್ರವು ನಾಳೀಯ ಆರೋಗ್ಯದ ಶ್ರೇಷ್ಠತೆಯ ಕೇಂದ್ರವಾಗಿದೆ. ಇದು ಎಲ್ಲಾ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ ಮತ್ತು ಕೇಂದ್ರದಲ್ಲಿಯೇ ಡ್ಯುಪ್ಲೆಕ್ಸ್ ಅಲ್ಟ್ರಾಸೌಂಡ್ ಸ್ಕ್ಯಾನ್‌ ನ ಸೌಲಭ್ಯವನ್ನು ಹೊಂದಿದೆ,  ಮತ್ತು ಇದರ ಪ್ರಯೋಜನ ಎಲ್ಲಾ ಅರ್ಹ ರೋಗಿಗಳಿಗೆ ಉಚಿತವಾಗಿ ದೊರೆಯುತ್ತದೆ. ಇದು ಅತ್ಯಂತ ವೃತ್ತಿಪರ ವೈದ್ಯರನ್ನು ಮತ್ತು ವಿನಯಶೀಲ ಸಿಬ್ಬಂದಿಯನ್ನು ಹೊಂದಿದ್ದು, ಚಿಕಿತ್ಸೆಯು ಪೂರ್ಣಗೊಂಡ ನಂತರವೂ ಎಲ್ಲಾ ರೋಗಿಗಳ  ಸಮಾಲೋಚನಾ ಭೇಟಿಯ ದಿನದಿಂದ ಹಿಡಿದು ಅವರ ಚಿಕಿತ್ಸೆ ಪೂರ್ಣಗೊಂಡ ನಂತರವೂ ಅವರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತದೆ.

 ವಿಶ್ವಪ್ರಸಿದ್ಧ ನಾಳೀಯ ತಜ್ಞರು ಮತ್ತು ಎರಡು ದಶಕಗಳ ವೈದ್ಯಕೀಯ ಅನುಭವ ಹೊಂದಿರುವ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಆಗಿರುವ ಡಾ.ರಾಜಾ ವಿ ಕೊಪ್ಪಲ್  ಅವರು ಅವಿಸ್ ನಾಳೀಯ ಕೇಂದ್ರದಲ್ಲಿನ ನಾಳೀಯ ತಂಡದ ನೇತೃತ್ವವನ್ನು ವಹಿಸಿದ್ದಾರೆ. ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು 12000+ ರೋಗಿಗಳಿಗೆ ನೀಡಿರುವ ಚಿಕಿತ್ಸೆ ಶೇಕಡಾ100 % ಯಶಸ್ಸನ್ನು ಕಂಡಿದೆ.

  ಏವಿಸ್ ನಾಳೀಯ ಕೇಂದ್ರದಲ್ಲಿ ಅತಿ ಹೆಚ್ಚಿನ ಮೆಚ್ಚುಗೆ ಪಡೆದಿರುವ ನಾಳೀಯ ಶಸ್ತ್ರಚಿಕಿತ್ಸಕ/ವ್ಯಾಸ್ಕುಲಾರ್ ಸರ್ಜನ್ ಡಾ. ರಾಜಾ ವಿ ಕೊಪ್ಪಾಳ ಅವರ ಅತ್ಯುತ್ತಮ ಆರೋಗ್ಯ ಸಂಸ್ಥೆಯಲ್ಲಿ ಅತ್ಯುತ್ತಮವಾದ ವೈದ್ಯಕೀಯ ಸಹಾಯವನ್ನು ಆರಿಸಿಕೊಳ್ಳಿ. ಹೊರಗಿನ ಊರುಗಳಿಂದ ಬರುವ  ರೋಗಿಗಳಿಗಾಗಿ ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇವೆ ಮತ್ತು ಎಲ್ಲಾ ಪ್ರಮುಖ ರಾಷ್ಟ್ರೀಯ ವಿಮಾ ಕಂಪನಿಗಳ ಹಣವಿಲ್ಲದ ಮೆಡ್‌ಕ್ಲೇಮ್ ನ ನೆರವು ನಿಮಗೆ ದಿನದ  24 ಗಂಟೆಯೂ ದೊರೆಯತ್ತದೆ. ನಿಮ್ಮ ಭೇಟಿಯನ್ನು ಇಂದೇ ನಿಗದಿಪಡಿಸಿಕೊಳ್ಳಿ!

Varicose Veins Treatment in Bengaluru | Chennai| | Visakhapatnam |Hyderabad |Coimbatore | Vijayawada | Guntur | Mysore | Ahmedabad |Tirupati |